ಲೈಫ್ ಜೊತೆ ಒಂದು ಸೆಲ್ಫಿಯಲ್ಲಿ ಹರಿಪ್ರಿಯಾ, ಪ್ರಜ್ವಲ್ ದೇವರಾಜ್ ಮತ್ತು ಪ್ರೇಮ್
ಸಿನಿಮಾ ಸುದ್ದಿ
'ಲೈಫ್ ಜೊತೆ ಒಂದು ಸೆಲ್ಫಿ' ಸೆಟ್ ನಲ್ಲಿ ಎಲ್ಲರ ನಡುವೆ ಕೆಮೆಸ್ಟ್ರಿ ಚೆನ್ನಾಗಿದೆ: ದಿನಕರ್ ತೂಗದೀಪ
ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ಲೈಫ್ ಜೊತೆ ಒಂದು ಸೆಲ್ಫಿಯ ಎರಡನೇ ಶೆಡ್ಯೂಲ್ ....
ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ಲೈಫ್ ಜೊತೆ ಒಂದು ಸೆಲ್ಫಿಯ ಎರಡನೇ ಶೆಡ್ಯೂಲ್ ನ್ನು ನಿರ್ದೇಶಕ ದಿನಕರ್ ತೂಗದೀಪ ಮುಗಿಸಿದ್ದಾರೆ. ಪ್ರೇಮ್, ಪ್ರಜ್ವಲ್ ಮತ್ತು ಹರಿಪ್ರಿಯಾ ನಟಿಸಿರುವ ಚಿತ್ರ ಸ್ನೇಹಿತರ ಒಂದು ರಸ್ತೆಪ್ರಯಾಣದ ಕಥೆಯನ್ನು ಹೊಂದಿದೆ. ಚಿತ್ರದ ಬಹುತೇಕ ಭಾಗಗಳನ್ನು ಉಡುಪಿ ಹಾಗೂ ಗೋವಾಗಳಲ್ಲಿ ಚಿತ್ರೀಕರಿಸಲಾಗಿದ್ದು ಕೆಲವು ಫೋಟೋಗಳು ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿವೆ. ಇನ್ನು 19 ದಿನಗಳ ಶೂಟಿಂಗ್ ಬಾಕಿ ಇವೆ.
ಮುಂದಿನ ಮೂರು ದಿನಗಳ ಶೂಟಿಂಗ್ ಶೆಡ್ಯೂಲ್ ಇದೇ 12ರಂದು ಆರಂಭವಾಗಲಿದೆ. ಚಿಕ್ಕಮಗಳೂರಿನಲ್ಲಿ ಎರಡು ದಿನ ಮತ್ತು ನಂತರ ಬೆಂಗಳೂರಿನಲ್ಲಿ ಶೂಟಿಂಗ್ ಮಾಡಿ ಮುಗಿಸುತ್ತೇವೆ. ಇಲ್ಲಿ ಇನ್ನಷ್ಟು ಕಲಾವಿದರು ಸೆಟ್ ನ್ನು ಪ್ರವೇಶ ಮಾಡಲಿದ್ದಾರೆ ಎನ್ನುತ್ತಾರೆ ದಿನಕರ್ ತೂಗದೀಪ.
ಚಿತ್ರಕ್ಕೆ ಸ್ಕ್ರಿಪ್ಟ್ ನ್ನು ದಿನಕರ್ ಪತ್ನಿ ಮಾನಸ ಬರೆದಿದ್ದು, ಚಿತ್ರ ಮೂಡಿಬಂದಿರುವ ರೀತಿ ದಿನಕರ್ ಗೆ ಇಷ್ಟವಾಗಿದೆಯಂತೆ. ಲೈಫ್ ಜೊತೆ ಒಂದು ಸೆಲ್ಫಿಯಲ್ಲಿ ಸಾಹಿತ್ಯ ತುಂಬಾ ಸರಳವಾಗಿದೆ.ಪಾತ್ರಗಳು ಆಸಕ್ತಿದಾಯಕವಾಗಿವೆ. ಪ್ರೇಮ್, ಪ್ರಜ್ವಲ್ ಮತ್ತು ಹರಿಪ್ರಿಯಾ ಮಧ್ಯೆ ಕೆಮೆಸ್ಟ್ರಿ ಚೆನ್ನಾಗಿ ಮೂಡಿಬಂದಿದ್ದು ತೆರೆಯ ಮೇಲೆ ಅವರನ್ನು ತೋರಿಸಿದ್ದು ಚಿತ್ರಕ್ಕೆ ಮತ್ತಷ್ಟು ಮೌಲ್ಯವನ್ನು ತರಲಿದೆ ಎನ್ನುತ್ತಾರೆ ದಿನಕರ್.
ಸಮೃದ್ಧಿ ಕ್ರಿಯೇಷನ್ ನ ಬಂಡವಾಳ ಹೂಡಿಕೆಯಡಿ ವಿ.ಹರಿಕೃಷ್ಣ ಸಂಗೀತ ಒದಗಿಸಿದ್ದು ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ