'ಅಮೇರಿಕಾ ಅಮೇರಿಕಾ' ಹುಡುಗಿ ಹೇಮಾ ಪಂಚಮುಖಿ ಎರಡನೇ ವಿವಾಹ

ಅಮೆರಿಕಾ ಅಮೆರಿಕಾ ಖ್ಯಾತಿಯ ಹೇಮಾ ಪಂಚಮುಖಿ ಎರಡನೇ ವಿವಾಹವಾಗಿದ್ದಾರೆ.
'ಅಮೇರಿಕಾ ಅಮೇರಿಕಾ' ಹುಡುಗಿ ಹೇಮಾ ಪಂಚಮುಖಿ ಎರಡನೇ ವಿವಾಹ
'ಅಮೇರಿಕಾ ಅಮೇರಿಕಾ' ಹುಡುಗಿ ಹೇಮಾ ಪಂಚಮುಖಿ ಎರಡನೇ ವಿವಾಹ
Updated on
ಬೆಂಗಳೂರು: ಅಮೆರಿಕಾ ಅಮೆರಿಕಾ ಖ್ಯಾತಿಯ ಹೇಮಾ ಪಂಚಮುಖಿ ಎರಡನೇ ವಿವಾಹವಾಗಿದ್ದಾರೆ. ದೊರೆ', 'ಅಮೇರಿಕಾ ಅಮೇರಿಕಾ', 'ರವಿಮಾಮ' 'ಸಂಭ್ರಮ' ಹೀಗೆ ಕೆಲವು ಕನ್ನಡ ಚಿತ್ರಗಳಲ್ಲಿ ಉತ್ತಮ ಅಭಿನಯ ನಿಡಿದ್ದ ಹೇಮಾ ಅವರು ಸ್ವಮೇಂದ್ರ ಪಂಚಮುಖಿ ಎನ್ನುವವರನ್ನು ವಿವಾಹವಾಗಿ ವಿದೇಶದಲ್ಲಿ ನೆಲೆಸಿದ್ದರು. 
ಕೆಲ ಸಮಯದ ಬಳಿಕ ಮತ್ತೆ ಭಾರತಕ್ಕೆ ಮರಳಿದ ನಟಿ ಹೇಮಾ ಅವರು ತಾತ ಗೋಪಿನಾಥ್‌ ದಾಸ್‌ ನಡೆಸುತಿದ್ದ ಪ್ರಭಾತ್‌ ಕಲಾವಿದರ ತಂಡದಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ ತಾವು ಅನೇಕ ವಿದ್ಯಾರ್ಥಿಗಳಿಗೆ  ನೃತ್ಯ ತರಬೇತಿಯನ್ನೂ ನೀಡುತ್ತಿದ್ದಾರೆ.
ಇದೇ ಎರಡು ದಿನಗಳ ಹಿಂದೆ ರಂಗೋಲಿ ಚಿತ್ರದ ನಾಯಕ ಪ್ರಶಾಂತ್ ಅವರನ್ನು ಹೇಮಾ ವಿವಾಹವಾಗಿದ್ದಾರೆ. ತಮ್ಮ ಹೆಅಸರನ್ನು ಹೇಮಾ ಪಂಚಮುಖಿ ಬದಲಾಗಿ ಹೇಮಾ ಪ್ರಭಾತ್ ಎಂದು ಬದಲಿಸಿಕೊಂಡಿದ್ದಾರೆ. ಪ್ರಶಾಂತ್‌ ಗೋಪಾಲ ಶಾಸ್ತ್ರಿ ಭರತನಾಟ್ಯ ಕಲಾವಿದರಾಗಿದ್ದು ಚಿಕ್ಕವಯಸ್ಸಿನಿಂದಲೇ ನಾಟ್ಯ ಕಲಾವಿದೆಯಾಗಿದ್ದ ಹೇಮಾಗೆ ತಮ್ಮಂತೆ ಕಲಾವಿದನನ್ನೇ ವಿವಾಹವಾಗಬೇಕೆಂದು ಇಚ್ಚೆ  ಇದ್ದಿತು.ಇದಾಗಲೇ ಪ್ರಭಾತ್ ಸಂಸ್ಥೆಯ ಅಡಿಯಲ್ಲಿ ಸಾಕಷ್ಟು  ನಾಟ್ಯ ಪ್ರದರ್ಶನವನ್ನು ನೀಡಿದ್ದ ಈ ಜೋಡಿ ಇದೀಗ ನಿಜ ಜೀವನದಲ್ಲಿಯೂ ಒಂದಾಗಿದೆ. ಈ ನವದಂಪತಿಗಳಿಗೆ ನಾವೂ ಶುಭ ಹಾರೈಸೋಣ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com