ಬೆನ್ನು ನೋವಿಂದ ಬಳಲುತ್ತಿರುವ ದಕ್ಷಿಣದ ಖ್ಯಾತ ನಟಿ ಅನುಷ್ಕಾ ಶೆಟ್ಟಿ

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಬೆನ್ನು ನೋವು ತೀವ್ರವಾಗಿದ್ದು ಅನುಷ್ಕಾ ಈ ಕೆಲವು ದಿನಗಳಲ್ಲಿ ಯಾವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ.
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ
ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಬೆನ್ನು ನೋವು ತೀವ್ರವಾಗಿದ್ದು ಅನುಷ್ಕಾ ಈ ಕೆಲವು ದಿನಗಳಲ್ಲಿ ಯಾವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಅಲ್ಲದೆ ಈ ನೋವು ಕಡಿಮೆ ಆಗುವವರೆಗೆ ಯಾವ ಚಲನಚಿತ್ರವನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ.
ನಟಿ ಅನುಷ್ಕಾ ಅವರಿಗೆ ಹಲವು ದಿನಗಳಿಂದಲೂ ಬೆನ್ನು ನೋವಿನ ಸಮಸ್ಯೆ ಇತ್ತು, ಅವರು ಇದರ ಚಿಕಿತ್ಸೆಗಾಗಿ ಕೊಯಮತ್ತೂರು ಹಾಗೂ ಕೇರಳಕ್ಕೆ ತೆರಳಿದ್ದರು ಎಂದು ಅವರ ಆಪ್ತ ಮೂಲಗಳಿಂದ ಮಾಹಿತಿ ಬಂದಿದೆ. ‘ಸೈಜ್ ಝೀರೋ' ಚಿತ್ರಕ್ಕಾಗಿ ನಟಿ ತನ್ನ ತೂಕ ಹೆಚ್ಚಿಸಿಕೊಂಡಿದ್ದರು. ಅತಿಯಾದ ತೂಕದ ಕಾರಣ ಇದೀಗ ಬೆನ್ನುನೋವು ಬಂದಿತ್ತು ಎನ್ನಲಾಗುತ್ತಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಕೆಲ ಸಮಯದ ವಿಶ್ರಾಂತಿಯ ನಂತರ ಅನುಷ್ಕಾ 'ಭಾಗಮತಿ' ಚಿತ್ರದ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಜಿ. ಅಶೋಕ್ ನಿರ್ದೇಶನದ ಈ ಚಿತ್ರ ಆದಿ ಪಿನಿಶೆಟ್ಟಿ, ಜಯರಾಮ್, ಮೊದಲಾದ ತಾರಾಬಳಗವನ್ನು ಹೊಂದಿದೆ.ಚಿತ್ರವು 2018 ಜನವರಿ 26ಕ್ಕೆ ತೆರೆಗೆ ಬರಲಿದ್ದು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಏನೇ ಆದರೂ ಬಾಹುಬಲಿ ನಟಿಯ ಬೆನ್ನುನೋವು ಅವರ ಅಭಿಮಾನಿಗಳಿಗೆ ತೀವ್ರ ವೇದನೆಯನ್ನುಂಟು ಮಾಡಿರುವುದು ಸುಳ್ಳಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com