ಮಾನ್ಯ ಪ್ರಧಾನ ಮಂತ್ರಿಗಳೇ ಎಂದು ಪತ್ರದ ಶೈಲಿಯಲ್ಲಿ ಪ್ರಾರಂಭವಾಗುವ ಟ್ವೀಟ್ ನಲ್ಲಿ ಪ್ರಕಾಶ್ ರೈ, ಪ್ರಧಾನಿಗೆ ಅಭಿನಂದನೆ ತಿಳಿಸುತ್ತಾರೆ. "ನಿಮ್ಮ ಅಭಿವೃದ್ದಿ ಕಾರ್ಯತಂತ್ರದಿಂದಾಗಿ ನೀವು ಭಾರೀ ಬಹುಮತಗಳಿಂದ ಗೆಲ್ಲಬೇಕಾಗಿತ್ತು. 150 ಕ್ಷೇತ್ರಗಳಲ್ಲಿ ಗೆಲ್ಲುವ ನಿಮ್ಮ ಗುರಿ ಏನಾಯಿತು? ನಿಮ್ಮ ತಂತ್ರ ಫಲಿಸಲಿಲ್ಲ. ಧರ್ಮ, ಜಾತಿ, ಪಾಕಿಸ್ತಾನ, ವೈಯುಕ್ತಿಕ ಲಾಭಗಳಿಕೆ ಈ ಎಲ್ಲಕ್ಕಿಂತ ದೊಡ್ಡ ಸಮಸ್ಯೆಗಳು ನಮ್ಮ ನಡುವೆ ಇದೆ. ಗ್ರಾಮೀಣ ಪ್ರದೇಶದ ರೈತರ ದನಿಯನ್ನು ದಮನ ಮಾಡಲಾಗಿದೆ, ಅಥವಾ ನಿರ್ಲಕ್ಷಿಸಲಾಗಿದೆ. ಆದರೆ ಇದೀಗ ಗ್ರಾಮ ಭಾರತದ ಸಮಸ್ಯೆಗಳ ದನಿ ಏರಿದೆ. ಆ ದನಿ ನಿಮಗೆ ಕೇಳುತ್ತಿದೆಯೆ?" ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.