ಪ್ರೇಮ್ ಕನ್ನಡದ ದುಬಾರಿ ನಿರ್ದೇಶಕ?

'ಕರಿಯ', 'ಜೋಗಿ' ಅಂತಹಾ ಬ್ಲಾಕ್ ಬಸ್ಟ್ರ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಪ್ರೇಮ್ ಇದೀಗ ದೊಡ್ಡ ಬಜೆಟ್ ಚಿತ್ರಗಳನ್ನು ನಿರ್ದೇಶಿಸಲು ತಯಾರಾಗಿದ್ದಾರೆ.
ಕನ್ನಡದ ದುಬಾರಿ ನಿರ್ದೇಶಕರಾಗಲಿದ್ದಾರೆ ಪ್ರೇಮ್
ಕನ್ನಡದ ದುಬಾರಿ ನಿರ್ದೇಶಕರಾಗಲಿದ್ದಾರೆ ಪ್ರೇಮ್
Updated on
ಬೆಂಗಳೂರು: 'ಕರಿಯ', 'ಜೋಗಿ' ಅಂತಹಾ ಬ್ಲಾಕ್ ಬಸ್ಟ್ರ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಪ್ರೇಮ್ ಇದೀಗ ದೊಡ್ಡ ಬಜೆಟ್ ಚಿತ್ರಗಳನ್ನು ನಿರ್ದೇಶಿಸಲು ತಯಾರಾಗಿದ್ದಾರೆ.
ಇದೀಗ ಬಹು ನಿರೀಕ್ಷಿತ ಚಿತ್ರ 'ದಿ ವಿಲನ್' ಗೆ ಆಕ್ಷನ್ ಕಟ್ ಹೇಳಿರುವ ಪ್ರೇಮ್ ಇದಕ್ಕೂ ಸಹ ಸಾಕಷ್ಟು ದೊಡ್ಡ ಸಂಭಾವನೆ ಪಡೆದುಕೊಂಡಿದ್ದಾರೆ. ಇದಾಗಿ ಮುಂದಿನ ವರ್ಷ ಅವರು ದರ್ಶನ್ ನಾಯಕನಟನಾಗಿ ಕಾಣಿಸಲಿರುವ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು ಇದಕ್ಕೆ 'ಹೆಬ್ಬುಲಿ' ಚಿತ್ರದ ನಿರ್ಮಾಪಕರು ಉಮಾಪತಿ ಬಂಡವಾಳ ತೊಡಗಿಸಿದ್ದಾರೆ.
ಗಾಂಧೀನಗರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರೆಂದು ಪ್ರೇಮ್ ಹೆಸರಾಗುತ್ತಿದ್ದಾರೆ ಎಂದು ಸುದ್ದಿಯೊಂದು ಹರಿದಾಡುತ್ತಿದೆ. ನಿರ್ಮಾಪಕ ಉಮಾಪತಿ ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು ನನ್ನ ನಿರ್ಮಾಣದಲ್ಲಿ ದರ್ಶನ್ ಅಭಿನಯದ ಚಿತ್ರಕ್ಕಾಗಿ ಪ್ರೇಮ್ ಎರಡು ಕೋಟಿ ಸಂಬಾವನೆ ಪಡೆಯಲಿದ್ದಾರೆ ಎಂದರು. ನಾವು ಹೂಡಿದ್ದ ಬಂದವಾಳಕ್ಕೆ ನ್ಯಾಯ ದೊರಕಲಿದೆ. ಪ್ರೇಮ್ ನಿರ್ದೇಶಕರಾಗಿ, ಚಿತ್ರಕಥೆ, ಸಂಭಾಷಣೆಗಾರರಾಗಿ, ಗೀತರಚನೆಕಾರರಾಗಿಯೂ ಬಹುಮುಖ ಪ್ರತಿಭೆ ಹೊಂದಿದ್ದಾರೆ. ಅವರ ಚಿತ್ರಗಳಲ್ಲಿ ದೃಶ್ಯ ವೈಭವಗಳಿಗೆ ಅವಕಾಶವಿದೆ. ಉತ್ತಮ ಕಥೆ, ಶ್ರೇಷ್ಠ ಚಿತ್ರವೊಂದನ್ನು ನಾವೂ ಬಯಸುತ್ತಿದ್ದೇವೆ" ಉಮಾಪತಿ ಎಕ್ಸ್ ಪ್ರೆಸ್ ಗೆ ತಿಳಿಇಸಿದರು.
"ನಟ ಹಾಗೂ ನಿರ್ದೇಶಕರ ಜತೆಗೆ ಚರ್ಚೆ ನಡೆಸಿದ ನಂತರ ಮತ್ತೆ ನನಗೆ ಇದರ ಕುರಿತು ಹೆಚ್ಚಿನ ವಿಚಾರ ತಿಳಿಸಲು ಸಾದ್ಯ. ಚಿತ್ರೀಕರಣ ಪ್ರಾಂಭವಾದ ನಂತರ ನಾನು ಇನ್ನಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ. ಆದರೆ ದರ್ಶನ್ ಹಾಗೂ ಪ್ರೇಮ್ ಕಾಂಬಿನೇಷನ್ ನ ಚಿತ್ರವೊಂದು ಹದಿನೈದು ವರ್ಷಗಳ ನಂತರ ಬರುತ್ತಿದ್ದು ಪ್ರೇಮ್ ಉತ್ತಮ ಟ್ವಿಸ್ಟ್ ಹೊಂದಿದ ಕಥೆಯನ್ನೇ ಹುಡುಕಲಿದ್ದಾರೆ ಎನ್ನುವುದು ಖಚಿತ. " ನಿರ್ಮಾಪಕರು ಭರವಸೆಯಿಂದ ನುಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com