ಭರ್ಜರಿ ಚಿತ್ರ ಶತದಿನೋತ್ಸವ ಸಂಭ್ರಮ, ಚಿತ್ರತಂಡದಿಂದ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ದತೆ

ಈ ಭಾನುವಾರ ಮೆಜೆಸ್ಟಿಕ್ ನಲ್ಲಿ ಹಬ್ಬದ ವಾತಾವರಣವಿರಲಿದೆ. ದ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರ ನೂರನೇ ದಿನದ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಇದರ ಸಂಭ್ರಮಾಚಣೆಗಾ........
ಭರ್ಜರಿ
ಭರ್ಜರಿ
Updated on
ಬೆಂಗಳೂರು: ಈ ಭಾನುವಾರ ಮೆಜೆಸ್ಟಿಕ್ ನಲ್ಲಿ ಹಬ್ಬದ ವಾತಾವರಣವಿರಲಿದೆ. ದ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರ ನೂರನೇ ದಿನದ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಇದರ ಸಂಭ್ರಮಾಚಣೆಗಾಗಿ ಸಾಕಷ್ಟು ಸಿದ್ದತೆ ನಡೆದಿದೆ. ಕರ್ನಾಟಕದಾದ್ಯಂತ ಸುಮಾರು 6 ಸಾವಿರ ಅಭಿಮಾನಿಗಳು ಪಾಲ್ಗೊಳ್ಳುವ ಈ ಕಾರ್ಯಕ್ರಮ ಚಿತ್ರೀಕರಣಕ್ಕೆ ಹೆಲಿಕ್ಯಾಮ್ ಅಳವಡಿಸುತ್ತಿರುವುದು ವಿಶೇಷ.

ಅದ್ದೂರಿ ಹಾಗೂ ಬಹದ್ದೂರ್ ಚಿತ್ರದ ಬಳಿಕ ಭರ್ಜರಿ ದ್ರುವ ಸರ್ಜಾ ಅಭಿನಯದ ಮೂರನೇ ಯಶಸ್ವಿ ಚಿತ್ರ ಎನಿಸಿದೆ. ಇದರ ಮೂಲಕ ನಾಯಕ ನಟ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಚೇತನ್ ಕುಮಾರ್ ಅವರ ನಿರ್ದೇಶನದ ಈ ಚಿತ್ರ ಕರ್ನಾಟಕದಾದ್ಯಂತ ಸುಮಾರು 34 ಚಿತ್ರಮಂದಿರಗಳಲ್ಲಿ ನೂರನೇ ದಿನದ ಪ್ರದರ್ಶನ ಕಾಣುತ್ತಿದೆ.

ಚಿತ್ರದ ಯಶಸ್ಸಿನ ಸಂಭ್ರಮಕ್ಕಾಗಿ ಭಾನುವಾರ, ಬೆಳಗ್ಗೆ 11 ಗಂಟೆಗೆ ಮೆಜೆಸ್ಟಿಕ್ ರಸ್ತೆಯಲ್ಲಿ ಮೆರವಣಿಗೆ ಆಯೋಜನೆಗೊಂಡಿದೆ. ನರ್ತಕಿ ಚಿತ್ರಮಂದಿರದ ಮುಂದೆ ಹೂವಿನ ಅಲಂಕಾರ ಹಾಗೂ ನಾಯಕನ ಕಟ್ ಔಟ್ ಗಳನ್ನು ಹಾಕಲಾಗುತ್ತದೆ. ಮೆರವಣಿಗೆಯಲ್ಲಿ 250 ಜನಪದ ಕಲಾವಿದರು ಭಾಗವಹಿಸಲಿದ್ದಾರೆ. ಮೈಸೂರು ಬ್ಯಾಂಕ್ ವೃತ್ತದಿಂದ ಮುಖ್ಯ ಚಿತ್ರಮಂದಿರಕ್ಕೆ ಭರ್ಜರಿ ತಂಡದೊಂದಿಗೆ ಮೆರವಣಿಗೆಯಲ್ಲಿ ನಾಯಕ ನಟ ದ್ರುವ ಸರ್ಜಾ ಅವರೂ ಆಗಮಿಸಲಿದ್ದಾರೆ. ಶತದಿನದ ಸಂಭ್ರಮಾಚರಾಣೆಯ ನೆನಪಿಗಾಘಿ  ಅವರು 101 ಕೆಜಿ ಕೇಕ್ ಅನ್ನು ಕತ್ತರಿಸಲಿದ್ದಾರೆ. ಚಿತ್ರಮಂದಿರಕ್ಕೆ ಭೇಟಿ ನೀಡುವ ಎಲ್ಲಾ ಅಭಿಮಾನಿಗಳಿಗೆ ಚಿತ್ರ ತಂಡವು ಭೋಜನ ವ್ಯವಸ್ಥೆ ಮಾಡಲು ತೀರ್ಮಾನಿಸಿದೆ.

ರುಚಿತಾ ರಾಮ್, ಹರಿಪ್ರಿಯಾ, ವೈಶಾಲಿ ದೀಪಕ್ ಸೇರಿ ಹಲವು ನಟರು ಈ ಚಿತ್ರದ ಭೂಮಿಕೆಯಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com