ಅಂಜನಿಪುತ್ರ
ಸಿನಿಮಾ ಸುದ್ದಿ
ಬೆಂಗಳೂರು: ಮೊಬೈಲ್ ನಲ್ಲಿ ಅಂಜನಿಪುತ್ರ ದೃಶ್ಯಗಳ ಚಿತ್ರೀಕರಣ, ವ್ಯಕ್ತಿಗೆ ಪೋಲೀಸರಿಂದ ಎಚ್ಚರಿಕೆ
ನಟ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ನಡುವೆ ಚಿತ್ರವನ್ನು ನೋಡ ಬಂದ ವ್ಯಕ್ತಿಯೊಬ್ಬ .......
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ನಡುವೆ ಚಿತ್ರವನ್ನು ನೋಡ ಬಂದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಸಿನಿಮಾವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ವೇಳೆ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ
ಚಿಕ್ಕಪೇಟೆಯಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ಆನಂದ್ ಎಂಬಾತ ಈ ಕೃತ್ಯ ಎಸಗಿದ್ದು ನಗರ್ತಪೇಟೆಯ ‘ಶಾರದ’ ಚಿತ್ರಮಂದಿರದಲ್ಲಿ ಘಟನೆ ಬೆಳಕಿಗೆ ಬಂದಿದೆ. ಚಿತ್ರಮಂದಿರದ ಮುಂದಿನ ಆಸನದಲ್ಲಿ ಕುಳಿತಿದ್ದ ಆನಂದ್ ಸಿನಿಮಾದಲ್ಲಿನ ಪುನೀತ್ ಎಂಟ್ರಿ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಇಒದನ್ನು ಗಮನಿಸಿದಘ ಪ್ರೇಕ್ಷಕರು ಚಿತ್ರಮಂದಿರದ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ.
ಚಿತ್ರಮಂದಿರ ಸಿಬ್ಬಂದಿ ಪೋಲೀಸರಿಗೆ ಮಾಹಿತಿ ನೀಡೀದ್ದು ಹೊಯ್ಸಳ ಪೋಲೀಸರು ಆಗಮಿಸಿ ಆನಂದ್ ನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.
ಹೆಂಡತಿಗಾಗಿ ಚಿತ್ರಿಸಿದೆ: "ನನ್ನ ಪತ್ನಿಗೆ ಪುನೀತ್ ರಾಜ್ ಕುಮಾರ್ ಎಂದರೆ ಬಹಳ ಇಷ್ಟ. ಆಕೆ ಅಪ್ಪು ಅಭಿಮಾನಿ. ನಾನು ಸಿನಿಮಾ ನೋಡಲು ತೆರಳುತ್ತೇನೆಂದಾಗ ಆಕೆಯೇ ಅಪ್ಪು ಎಂಟ್ರಿಯನ್ನು ರೆಕಾರ್ಡ್ ಮಾಡಿಕೊಂಡು ತನ್ನಿ ಎಂದಳು. ಅವಳಿಗಾಗಿ ನಾನು ಈ ಕೆಲಸ ಮಾಡಿದ್ದೆ ಬಿಟ್ಟರೆ ಬೇರಾವ ಉದ್ದೇಶವಿಲ್ಲ" ಎಂದು ಆರೋಪಿ ಆನಂದ್ ವಿವರಣೆ ನೀಡಿದ್ದಾನೆ.
"ಆನಂದ್ ತನ್ನ ಪತ್ನಿಗಾಗಿ ಈ ಕೆಲಸ ಮಾಡಿದ್ದೆನಂದಿದು ಒಪ್ಪಿಕೊಂಡಿದ್ದಾನೆ. ಇದೇ ವೇಳೆ ನಾವು ಅವನ ಹೇಳಿಕೆ ಆಧರಿಸಿ ಅವನ ಪತ್ನಿಗೆ ಕರೆ ಮಾಡಿದ್ದೆವು. ಆಕೆ ಸಹ ಆನಂದ್ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ಇನ್ನು ಆನಂದ್ ಮೊಬೈಲ್ ಅಷ್ಟೇನೂ ಉತ್ತಮ ಗುಣಮಟ್ಟದ್ದಾಗಿರಲಿಲ್ಲ. ರೆಕಾರ್ಡಿಂಗ್ ಆದ ದೃಶ್ಯಗಳು ಉತ್ತಮವಾಗಿರಲಿಲ್ಲ. ಹೀಗಾಗಿ ಇನ್ನೊಮ್ಮೆ ಹೀಗೆ ವರ್ತಿಸಬೇಡಿ ಎಂದು ಎಚ್ಚರಿಸಿ ಬಿಟ್ಟು ಕಳಿಸಿದ್ದೇವೆ" ಪೋಲೀಸರು ವಿವರಿಸಿದರು.
ಫೇಸ್ ಬುಕ್ ಲೈವ್ ನಲ್ಲಿ ‘ಅಂಜನಿಪುತ್ರ’: ಇನ್ನೊಂದೇ ಘಟನೆಯಲ್ಲಿ ಬೆಂಗಳೂರಿನ ನಿತೀಶ್ ಹಾಗೂ ಆತನ ನಾಲ್ವರು ಸ್ನೇಹಿತರು ಯಲಹಂಕ ಉಲ್ಲಾಸ್ ಚಿತ್ರಮಂದಿರದಲ್ಲಿ 'ಅಂಜನಿಪುತ್ರ' ಚಿತ್ರ ನೋಡಲು ಆಗಮಿಸಿದ್ದು ಆ ವೇಳೆ ಚಿತ್ರದ ದೃಶ್ಯವನ್ನು ಫೇಸ್ ಬುಕ್ ಲೈವ್ ಮಾಡಿದ್ದಾರೆ. ಬೆಳಗಿನ ಪ್ರದರ್ಶನಕ್ಕೆ ಆಗಮಿಸಿದ್ದ ಆರೋಪಿಗಳ ತಂಡ ಸುಮಾರು 1 ಗಂಟೆ 10 ನಿಮಿಷದ ಕಾಲದ ದೃಶ್ಯಗಳನ್ನು ಲೈವ್ ಅಪ್ ಲೋಡ್ ಮಾಡಿದ್ದಾರೆ. ಈ ಸಂಬಂಧ ಚಿತ್ರತಂಡವು ಆರೋಪಿ ನಿತೀಶ್ ವಿರುದ್ಧ ಪೋಲೀಸ್ ದೂರು ಸಲ್ಲಿಸಲು ಮುಂದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ