ಶರಣ್
ಸಿನಿಮಾ ಸುದ್ದಿ
ಮತ್ತೆ ರ‍್ಯಾಂಬೊ ದಿನಗಳಿಗೆ ಮರಳಿದ ಶರಣ್
ಶರಣ್ ಮತ್ತೆ ರ್‍ಯಾಂಬೋ ದಿನಗಳಿಗೆ ಮರಳಿದ್ದಾರೆ. ಅವರ ಮುಂಬರುವ ಚಿತ್ರಕ್ಕೆ ರ್‍ಯಾಂಬೋ -2 ಎಂದು ನಾಮಕರಣ ಮಾಡಲಾಗಿದೆ.
ಬೆಂಗಳೂರು: ಶರಣ್ ಮತ್ತೆ ರ್‍ಯಾಂಬೋ ದಿನಗಳಿಗೆ ಮರಳಿದ್ದಾರೆ. ಅವರ ಮುಂಬರುವ ಚಿತ್ರಕ್ಕೆ ರ್‍ಯಾಂಬೋ -2 ಎಂದು ನಾಮಕರಣ ಮಾಡಲಾಗಿದೆ.
ಹಿಂದೆ ದಿಲ್ ವಾಲಾ ಚಿತ್ರ ನಿರ್ದೇಶಿಸಿದ್ದ ಅನಿಲ್ ಕುಮಾರ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಈ ಚಿತ್ರವು ಶರಣ್ಆವರ ಸ್ವಂತ ಬ್ಯಾನರ್ ಲಡ್ಡು ಸಿನಿಮಾ ಬ್ಯಾನರ್ ನಡಿ ಮುಡಿಬರುತ್ತಿದೆ. ಇದಕ್ಕಾಗಿ ಅಟ್ಲಾಂಟ ನಾಗೇಂದ್ರ ಹಾಗೂ ಚಿತ್ರಕ್ಕೆ ಕೆಲಸ ಮಾಡುವ ತಂತ್ರಜ್ಞರು ಸೇರಿ ಏಳು ನಿರ್ಮಾಪಕರು ಶರಣ್ ಜತೆ ಕೈಜೋಡಿಸಿದ್ದಾರೆ.
ಇನ್ನು ಚಿತ್ರದ ಬಗೆಗೆ ಚಿತ್ರತಂದ ಈಗಲೇ ಏನನ್ನೂ ಹೆಳಲು ಸಿದ್ದವಿಲ್ಲ. ಆದರೆ ರ್‍ಯಾಂಬೋ' ಕಥೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಚಿತ್ರತಂಡದ ಅಭಿಪ್ರಾಯ. "ರ್‍ಯಾಂಬೋ ನಲ್ಲಿನಂತೆ, ಒಂದು ಕಾರು ರ್‍ಯಾಂಬೋ 2 ರಲ್ಲಿ ಸಹ ಪ್ರಮುಖ ಪಾತ್ರವನ್ನು ವಹಿಸುತ್ತದೆ, ನಾವು ಕಥೆಯ ಥೀಮ್ ಗೆ ಸೂಕ್ತವಾದ ಶೀರ್ಷಿಕೆಯನ್ನು ಇಟ್ಟಿದ್ದೇವೆ" ಎಂದು ಚಿತ್ರದ ನಿರ್ಮಾಪಕರಲ್ಲಿ ಓರ್ವರಾದ ತರುಣ್ ಸುಧೀರ್ ಹೇಳಿದ್ದಾರೆ.
"ಚಿತ್ರದ ಆಡಿಯೋ ಟೀಸರ್ ಕ್ರಿಸ್ ಮಸ್ ವೇಳೆಗೆ ಬಿಡುಗಡೆಗೊಳ್ಳಲಿದೆ ಮತ್ತು ಹೊಸ ವರ್ಷದ ವೇಳೆ ಅರ್ಜುನ್ ಜನ್ಯ ಸಂಯೋಜಿಸಿದ ಪೂರ್ಣ ಹಾಡನ್ನು ಬಿಡುಗಡೆ ಮಾಡಲು ನಾವು ನಿರ್ಧರಿಸಿದ್ದೇವೆ" ಎಂದು ರ್‍ಯಾಂಬೋ 2 ಚಿತ್ರತಂಡ ಹೇಳಿಕೊಂಡಿದೆ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದ್ದು ಬರುವ ಫೆಬ್ರವರಿಯಲ್ಲಿ ಚಿತ್ರವು ತೆರೆಗೆ ಬರಲಿದೆ. ಚಿತ್ರದಲ್ಲಿ ಶರಣ್ ಜತೆಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ