ಪ್ರೀತಿ ಇರುವಲ್ಲಿ ಭಾವನೆಗಳು ಇರುತ್ತವೆ: ನಟ ಗಣೇಶ್

ಗಣೇಶ್ ಸಿನಿಮಾಗಳಲ್ಲಿ ಅನೇಕ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾಳೆ ಬಿಡುಗಡೆಯಾಗುತ್ತಿರುವ ಸುನಿ....
ನಟ ಗಣೇಶ್
ನಟ ಗಣೇಶ್
ಗಣೇಶ್ ಸಿನಿಮಾಗಳಲ್ಲಿ ಅನೇಕ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾಳೆ ಬಿಡುಗಡೆಯಾಗುತ್ತಿರುವ ಸುನಿ ನಿರ್ದೇಶನದ ಚಮಕ್ ಚಿತ್ರದಲ್ಲಿ ಸ್ತ್ರೀರೋಗ ತಜ್ಞ ಡಾ.ಖುಶ್ ಪಾತ್ರವನ್ನು ನಿರ್ವಹಿಸಿದ್ದಾರೆ. ಪತಿ-ಪತ್ನಿಯ ನಡುವಿನ ಕಥೆ ಇದಾಗಿದ್ದು, ಸಂಬಂಧಗಳಲ್ಲಿನ ಕೊರತೆ ಬಗ್ಗೆ ಕಥೆ ಹೊಂದಿರುತ್ತದೆ. ತಮಗೆ ರೊಮ್ಯಾಂಟಿಕ್ ಪಾತ್ರಗಳಲ್ಲಿ ಅನುಭವಿಸುವುದು ಸುಲಭ ಎನ್ನುತ್ತಾರೆ ಗಣೇಶ್.
ಈ ಚಿತ್ರದಲ್ಲಿ ಸ್ತ್ರೀರೋಗ ತಜ್ಞನಾಗಿ ಪಾತ್ರ ನಿಭಾಯಿಸಲು ಸ್ತ್ರೀ ರೋಗ ವೈದ್ಯರಿಂದ ಕೆಲವು ಟಿಪ್ಸ್ ಗಳನ್ನು ಪಡೆದುಕೊಂಡಿದ್ದೇನೆ. ಎಲ್ಲಾ ಗಂಡಂದಿರು ಜೀವನದ ಒಂದು ಹಂತದಲ್ಲಿ ಸ್ತ್ರೀರೋಗ ತಜ್ಞರಾಗುತ್ತಾರೆ. ನಾವು ಮಗು ಹಡೆಯಲು ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಪತ್ನಿಯ ಪಕ್ಕದಲ್ಲಿ ನಿಂತು ಮಗು ಹುಟ್ಟುವವರೆಗೆ ಮತ್ತು ಹುಟ್ಟಿದ ನಂತರ ಪತ್ನಿಯ ಜೊತೆ ಮಗುವಿನ ಆರೈಕೆಯಲ್ಲಿ ಸಮಾಜ ಜವಾಬ್ದಾರಿ ಹೊರಬಹುದು ಎನ್ನುತ್ತಾರೆ ಗಣೇಶ್.
ಜೀವನದಲ್ಲಿ ಪ್ರೀತಿಯನ್ನು ಪಡೆಯುವಲ್ಲಿ ವಿಫಲರಾದವರು ಈ ಚಿತ್ರವನ್ನು ತಮ್ಮ ಜೀವನಕ್ಕೆ ಹೋಲಿಸಬಹುದು. ಚಿತ್ರದ ಕೊನೆಯ 20 ನಿಮಿಷಗಳನ್ನು ನೋಡಿದವರು ತಮ್ಮ ಪ್ರೀತಿಪಾತ್ರರ ಜೊತೆ ಮತ್ತೆ ಸೇರಲು ಪ್ರಭಾವ ಬೀರುವ ಸಾಧ್ಯತೆ ಕೂಡ ಇದೆ ಎನ್ನುತ್ತಾರೆ.
ಒಬ್ಬ ಗೃಹಿಣಿ ತನ್ನ ಮನೆಯ ಸದಸ್ಯರಿಗೆ ಸಂಪೂರ್ಣ ಪ್ರೀತಿ, ಕಾಳಜಿ ತೋರಿಸುತ್ತಾಳೆ. ಅವಳಿಗೆ ಅದನ್ನು ಉಳಿದ ಕುಟುಂಬ ಸದಸ್ಯರು ನೀಡಬೇಕು ಎನ್ನುವ ಗಣೇಶ್ ವಿರಾಮದ ವೇಳೆಯಲ್ಲಿ ತಮ್ಮ ಮನೆಯಲ್ಲಿ ಪತ್ನಿ ಶಿಲ್ಪಾಗೆ ಅಡುಗೆ ಮಾಡಲು ಸಹಾಯ ಮಾಡುತ್ತಾರಂತೆ.
ನಾನು ನನ್ನ ವಿರಾಮದ ವೇಳೆಯನ್ನು ಕುಟುಂಬ ಜೊತೆ ಕಳೆಯಲು ಇಚ್ಛಿಸುತ್ತೇನೆ. ಮನೆಯಲ್ಲಿಲ್ಲದೆ ಹೊರಗೆ ಶೂಟಿಂಗ್ ನಲ್ಲಿ ಇರುವಾಗ ಸ್ಕೈಪೆ, ವಿಡಿಯೊ ಕಾಲ್ ಮೂಲಕ ಪತ್ನಿ ಮತ್ತು ಮಕ್ಕಳ ಜೊತೆ ಮಾತನಾಡುತ್ತೇನೆ ಎಂದು ಗಣೇಶ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com