ನನ್ನ ಕಥೆಗಳನ್ನು ನನ್ನದೇ ರೀತಿಯಲ್ಲಿ ಹೇಳುವ ಸಮಯವಿದು: ತರುಣ್

ನಿರ್ದೇಶಕ-ಸಹೋದರ ನಂದಕಿಶೋರ್ ಜೊತೆಗೆ ಹಲವು ಸಿನೆಮಾಗಳಲ್ಲಿ ದುಡಿದ ತರುಣ್ ಈಗ 'ಚೌಕ' ಸಿನೆಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ನಾಳೆ ಸಿನೆಮಾ ಬಿಡುಗಡೆಗೆ
'ಚೌಕ' ನಿರ್ದೇಶಕ ತರುಣ್
'ಚೌಕ' ನಿರ್ದೇಶಕ ತರುಣ್
Updated on
ಬೆಂಗಳೂರು: ನಿರ್ದೇಶಕ-ಸಹೋದರ ನಂದಕಿಶೋರ್ ಜೊತೆಗೆ ಹಲವು ಸಿನೆಮಾಗಳಲ್ಲಿ ದುಡಿದ ತರುಣ್ ಈಗ 'ಚೌಕ' ಸಿನೆಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ನಾಳೆ ಸಿನೆಮಾ ಬಿಡುಗಡೆಗ ಸಿದ್ಧವಾಗಿದೆ. 
೮ ನಟರು, ೨೫ ತಂತ್ರಜ್ಞರು, ದರ್ಶನ ಅತಿಥಿ ಪಾತ್ರದಲ್ಲಿ ನಟನೆ, ಪುನೀತ್ ರಾಜಕುಮಾರ್ ಹಾಡೊಂದನ್ನು ಹಾಡಿರುವುದು, ದ್ವಾರಕೀಶ್ ನಿರ್ಮಾಣದ ೫೦ ನೆಯ ಚಿತ್ರ ಹೀಗೆ ಕುತೂಹಲಗಳ ಮಹಾಪೂರವನ್ನೇ ಹೊತ್ತಿ ತಂದಿರುವ ಈ ಸಿನೆಮಾ ಅಷ್ಟೇ ನಿರೀಕ್ಷೆಗಳನ್ನು ಕೂಡ ಹುಟ್ಟಿಸಿದೆ. 
ತಮ್ಮ ವೃತ್ತಿಜೀವನದ ಮೊದಲ ದಿನಗಳಿಂದಲೂ ದೊಡ್ಡದ್ದನ್ನು ಸಾಧಿಸುವ ಆಸೆ ಇತ್ತು ಎನ್ನುವ ನಿರ್ದೇಶಕ "ನಮ್ಮ ಮನೆಯಲ್ಲಿಯೇ ರಂಗಭೂಮಿ ಮತ್ತು ನಾಟಕಗಳನ್ನು ಬಾಲ್ಯದಿಂದ ನೋಡುತ್ತಾ ಬೆಳೆದ ನನಗೆ ಅದರ ಬಗ್ಗೆ ತಾತ್ಸಾರ ಮೂಡಿತ್ತು. ನಾನು ಸ್ಟೇಜ್ ಹತ್ತಿದ್ದು ೮ ನೇ ತರಗತಿಯಲ್ಲಿ. ನನಗೆ ಕ್ರಿಕೆಟ್ ಆಟಗಾರನಾಗುವ ಆಸೆಯಿತ್ತು. ಆದರೆ ಒಂದು ಘಟನೆ ಎಲ್ಲವನ್ನು ಬದಲಿಸಿತು" ಎಂದು ನೆನಪಿಸಿಕೊಳ್ಳುವ ತರುಣ್, ನಾಟಕ ಮತ್ತು ನೃತ್ಯಕ್ಕೆ ಬಂದಾಗ ತಮ್ಮ ಶಾಲೆಯ ಅಧ್ಯಾಪಕರು ಯಾವಾಗಲೂ ಬಾಲಕಿಯರನ್ನೇ ಆಯ್ಕೆ ಮಾಡುತ್ತಿದ್ದರು ಮತ್ತು ಬಾಲಕರನ್ನು ಉಪೇಕ್ಷಿಸುತ್ತಿದ್ದರು " ಆದುದರಿಂದ ಕೆಲವು ಬಾಲಕರು ಸೇರಿಕೊಂಡು ಒಂದು ಸಣ್ಣ ನಾಟಕ ಮಾಡಲು ಮುಂದಾದೆವು. ಆದರೆ ಅದನ್ನು ತಿರಸ್ಕರಿಸಲಾಯಿತು. ಆಗ ನೃತ್ಯವೊಂದನ್ನು ನಿರ್ದೇಶಿಸಲು ನಾನು ಮುಂದಾದೆ. ಅದು ಯಶಸ್ವಿಯಾಗಿ ಮೊದಲ ಬಹುಮಾನ ಗಳಿಸಿತು. ನನ್ನ ಸೃಜನಶೀಲತೆಯ ಮೊದಲ ಅಧ್ಯಾಯ ದು" ಎಂದು ನೆನಪಿಸಿಕೊಳ್ಳುತ್ತಾರೆ ಚೊಚ್ಚಲ ನಿರ್ದೇಶನದ ಸಿನೆಮಾ ಬಿಡುಗಡೆಯ ಸಂತಸದಲ್ಲಿರುವ ತರುಣ್. 
ಎಲ್ಲ ಸಿನೆಮಾಗಳು ಅವಧಿಯನ್ನು ಕಡಿಮೆ ಮಾಡುಕೊಳ್ಳುವತ್ತ ಮುಂದುವರೆದಿರುವಾಗ 'ಚೌಕ' ೨ ಘಂಟೆ ೫೩ ನಿಮಿಷಗಳ ಸಿನೆಮಾ. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ನಿರ್ದೇಶಕ "'ದಂಗಾಲ್' ಕೂಡ ಸುದೀರ್ಘ ಅವಧಿಯ ಸಿನೆಮಾ, ಆದರೆ ಅದರ ಬಗ್ಗೆ ಯಾರು ದೂರಲಿಲ್ಲ. ಲಗಾನ್ ಕೂಡ. ಇತ್ತೀಚಿನ ಕನ್ನಡ ಚಿತ್ರ ಕಿರಿಕ್ ಪಾರ್ಟಿ ಕೂಡ ೨ ಘಂಟೆ ೪೫ ನಿಮಿಷಗಳ ಸಿನೆಮಾ" ಎಂದು ಉದಾಹರಣೆಗಳನ್ನು ಕೊಟ್ಟು ತಮ್ಮ ಸಿನೆಮಾವನ್ನು ಕೂಡ ವಿಷಯಕ್ಕೆ ಜನ ಮೆಚ್ಚಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com