ಮಿಷ್ಠಿ ಚಕ್ರವರ್ತಿ
ಸಿನಿಮಾ ಸುದ್ದಿ
ಮನೋರಂಜನ್ ಗೆ ಜೋಡಿಯಾಗಿ ಗ್ಲಾಮರ್ ಗೊಂಬೆ ಮಿಷ್ಠಿ ಕನ್ನಡಕ್ಕೆ
ಮನೋರಂಜನ್ ಅವರ 2 ನೇ ಚಿತ್ರವನ್ನು ನಿರ್ದೇಶಿಸುತ್ತಿರುವ ನಂದ ಕಿಶೋರ್ ಗ್ಲಾಮರ್ ಗೊಮೆ ಮಿಷ್ಠಿ ಚಕ್ರವರ್ತಿ ಅವರನ್ನು ಕನ್ನಡಕ್ಕೆ ಕರೆತಂದಿದ್ದಾರೆ.
ಮನೋರಂಜನ್ ಅವರ 2 ನೇ ಚಿತ್ರವನ್ನು ನಿರ್ದೇಶಿಸುತ್ತಿರುವ ನಂದ ಕಿಶೋರ್ ಗ್ಲಾಮರ್ ಗೊಮೆ ಮಿಷ್ಠಿ ಚಕ್ರವರ್ತಿ ಅವರನ್ನು ಕನ್ನಡಕ್ಕೆ ಕರೆತಂದಿದ್ದಾರೆ.
ಸುಭಾಷ್ ಗಾಯ್ ಅವರ ಕಾಂಚಿ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಮಿಷ್ಠಿ, ತಮಿಳು, ಮಲಯಾಳಂ, ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ತಮ್ಮ ಮೊದಲ ಕನ್ನಡ ಚಿತ್ರದಲ್ಲಿ ಮಿಷ್ಠಿ ಚಕ್ರವರ್ತಿ ಸಾಮಾನ್ಯ ಹುಡುಗಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಮೈಸೂರಿನಲ್ಲಿ 4 ದಿನಗಳ ಚಿತ್ರೀಕರಣವನ್ನು ಮುಗಿಸಿದ್ದಾರೆ.
ಸಿಟಿ ಎಕ್ಸ್ ಪ್ರೆಸ್ ಗೆ ಮನೋರಂಜನ್ ಜೊತೆಗೆ ಅಭಿನಯಿಸುತ್ತಿರುವ ಮಿಷ್ಠಿ ಅಭಿನಯದ ಫಸ್ಟ್ ಲುಕ್ ದೊರೆತಿದ್ದು, ಸಾಮಾನ್ಯ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ವೆಲೈ ಇಲ್ಲಾ ಪಟ್ಟಧಾರಿ ಸಿನಿಮಾವನ್ನು ರೀಮೇಕ್ ಮಾಡಲಾಗುತ್ತಿದ್ದು, ಅಮಲಾ ಪೌಲ್ ನಟಿಸಿರುವ ಪಾತ್ರದಲ್ಲಿ ಮಿಷ್ಠಿ ಚಕ್ರವರ್ತಿ ಅಭಿನಯಿಸುತ್ತಿದ್ದಾರೆ. ಸಾಯಿ ಕುಮಾರ್ ಹಾಗೂ ಸಿತಾರ ನಾಯಕನ ಪೋಷಕರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಫೆ.28 ರ ವರೆಗೆ ಚಿತ್ರತಂಡ ಮೈಸೂರಿನಲ್ಲೇ ಇರಲಿದ್ದು, ಚಿತ್ರದ ಹೆಸರನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ರಾಕ್ ಲೈನ್ ಪ್ರೊಡಕ್ಷನ್ಸ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಮನೆಯೊಂದರಲ್ಲಿ ಚಿತ್ರದ ಪ್ರಮುಖ ಭಾಗಗಳನ್ನು ಚಿತ್ರೀಕರಿಸಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ