ಬೆಂಗಳೂರು: ನಿರ್ದೇಶಕ-ನಟ ಜೋಡಿ ಯೋಗರಾಜ್ ಭಟ್ ಮತ್ತು ಗಣೇಶ್ ಹಿಂದಿರುಗಿದ್ದಾರೆ. ಪ್ರೇಮಿಗಳ ದಿನಕ್ಕೆ ಅವರ ಮುಂದಿನ ಸಿನೆಮಾ 'ಮುಗುಳುನಗೆ' ಪೋಸ್ಟರ್ ಬಿಡುಗಡೆ ಮಾಡಿರುವುದು ವಿಶೇಷ.
ಸಾಫ್ಟ್ ವೇರ್ ಎಂಜಿನಿಯರ್ ಪಾತ್ರ ನಿರ್ವಹಿಸುತ್ತಿರುವ ಗಣೇಶ್ ಈ ಸಿನೆಮಾದಲ್ಲಿ ವಿಭಿನ್ನ ನೋಟಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮತ್ತೊಂದು ಆಸಕ್ತಿದಾಯಕ ಸಂಗತಿಯಲ್ಲಿ ಈ ಸಿನೆಮಾ ಪೋಸ್ಟರ್ ನಲ್ಲಿ ಗಾಂಧಿ ಪ್ರತಿಮೆ ಕೂಡ ಕಾಣಿಸಿಕೊಂಡಿದೆ. ಇದು ಸಿನೆಮಾ ಕಥೆಗೆ ಪ್ರಮುಖ ಸಂಗತಿ ಎಂದು ತಿಳಿದುಬಂದಿದೆ.
ಪುದುಚೆರಿಯಲ್ಲಿರುವ ಈ ಗಾಂಧಿ ವೃತ್ತದ ಸುತ್ತ ಸಿನೆಮಾದ ಹಲವು ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಸಿನೆಮಾತಂಡ ಚಿತ್ರಕಥೆ, ಸಿನೆಮಾ ವಿಷಯ ಅಥವಾ ಗಾಂಧಿ ಪ್ರತಿಮೆಯ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದೆ ಹೋದರು, ನಾಯಕನಟನ ಜೀವನದಲ್ಲಿ ನಡೆಯುವ ಘಟನೆಗಳಿಗೆ ಆ ಪ್ರತಿಮೆ ಸಾಂಕೇತಿಕವಾಗಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.
ಸಿನೆಮಾ ನೋಡಿದ ಮೇಲೆ ಗಾಂಧಿ ಪ್ರತಿಮೆ ಚಿತ್ರಿತವಾಗಿರುವುದರ ಬಗ್ಗೆ ಪ್ರೇಕ್ಷಕರಿಗೆ ತಿಳಿಯಲಿದೆ ಎನ್ನುತ್ತದೆ ಚಿತ್ರತಂಡ. ಇಂದಿನಿಂದ ಬೆಂಗಳೂರಿನ ಸಾಫ್ಟ್ವೇರ್ ಸಂಸ್ಥೆಯಲ್ಲಿ ಎರಡು ದಿನದ ಚಿತ್ರೀಕರಣ ನಡೆಯಲಿದೆ.
'ಮುಂಗಾರು ಮಳೆ', 'ಗಾಳಿಪಟ' ಸಿನೆಮಾಗಳ ನಂತರ ಯೋಗರಾಜ್-ಗಣೇಶ್ ಜೋಡಿಯ ಮೂರನೇ ಸಿನೆಮಾ ಇದು. ಈ ರೋಮ್ಯಾಂಟಿಕ್ ಚಿತ್ರದಲ್ಲಿ ಮೂವರು ನಾಯಕ ನಟಿಯರು ಇದ್ದು, ಅಮೂಲ್ಯ, ಆಶಿಕಾ ಮತ್ತು ನಿಕಿತಾ ನಾರಾಯಣ ಗಣೇಶ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.
ವಿ ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಸುಜ್ಞಾನ ಸಿನೆಮ್ಯಾಟೋಗ್ರಾಫರ್.