ತಮ್ಮ ಮುಂಬರುವ ದ್ವಿಭಾಷಾ ಚಿತ್ರ ರೋಗ್ ಬಗ್ಗೆ ನಿರ್ದೇಶಕ ಪುರಿ ಜಗನ್ನಾಥ್ ಸಾಕಷ್ಟು ಕುತೂಹಲ ಸೃಷ್ಟಿಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರದ ನಾಯಕ ಇಶಾನ್ ತಲೆಕೆಳಗಾಗಿ ನೇತಾಡುತ್ತಿರುವ ಪೋಸ್ಟರ್ ನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ನಂತರ ನಿನ್ನೆ ಮೋಶನ್ ಪೋಸ್ಟರ್ ನ್ನು ಬಿಡುಗಡೆ ಮಾಡಿ ಪ್ರತಿಯೊಬ್ಬರ ದೃಷ್ಟಿ ಹರಿಯುವಂತೆ ಮಾಡಿದ್ದರು.