ಅಮಲಾ ಪೌಲ್, ಎಎಲ್ ವಿಜಯ್
ಸಿನಿಮಾ ಸುದ್ದಿ
ನಿರ್ದೇಶಕ ವಿಜಯ್-ನಟಿ ಅಮಲಾ ಪೌಲ್ ವಿಚ್ಛೇದನಕ್ಕೆ ಕೋರ್ಟ್ ಅಸ್ತು
ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎಎಲ್ ವಿಜಯ್ ಅವರಿಗೆ ಸ್ಥಳೀಯ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ...
ಚೆನ್ನೈ: ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ಎಎಲ್ ವಿಜಯ್ ಅವರಿಗೆ ಸ್ಥಳೀಯ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ.
ಈ ಸ್ಟಾರ್ ಜೋಡಿ 2016ರ ಆಗಸ್ಟ್ ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಇಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಕೊನೆಗೂ ವಿಚ್ಛೇದನ ನೀಡಿದೆ. ಇಬ್ಬರು ಯಾವುದೇ ರೀತಿಯ ಪರಿಹಾರವನ್ನು ಕೋರಿರಲಿಲ್ಲ.
2014ರ ಜೂನ್ 12ರಂದು ಅಮಲಾ ಪೌಲ್ ಮತ್ತು ವಿಜಯ್ ವಿವಾಹವಾಗಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಕೌಟುಂಬಿಕ ಕಾರಣಗಳಿಂದ ಈ ದಂಪತಿಗಳು 2015ರ ಮಾರ್ಚ್ ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

