ಮುಫ್ತಿ ಸೆಟ್ ನಲ್ಲಿ ಶಿವಣ್ಣ, ಚಿತ್ರತಂಡಕ್ಕೆ ಆನಂದ

ಮುಫ್ತಿ ಚಿತ್ರತಂಡ ಅದರಲ್ಲೂ ನಟ ಶ್ರೀ ಮುರಳಿ ಚಿತ್ರದ ಸೆಟ್ ನಲ್ಲಿ ಶಿವರಾಜ್ ಕುಮಾರ್ ಇರುವಿಕೆಯಿಂದ...
ಮುಫ್ತಿ ಚಿತ್ರದ ಸೆಟ್ ನಲ್ಲಿ ಶ್ರೀ ಮುರಳಿ, ಶಿವರಾಜ್ ಕುಮಾರ್
ಮುಫ್ತಿ ಚಿತ್ರದ ಸೆಟ್ ನಲ್ಲಿ ಶ್ರೀ ಮುರಳಿ, ಶಿವರಾಜ್ ಕುಮಾರ್
Updated on
ಮುಫ್ತಿ ಚಿತ್ರತಂಡ ಅದರಲ್ಲೂ ನಟ ಶ್ರೀ ಮುರಳಿ ಚಿತ್ರದ ಸೆಟ್ ನಲ್ಲಿ ಶಿವರಾಜ್ ಕುಮಾರ್ ಇರುವಿಕೆಯಿಂದ ತುಂಬಾ ಉತ್ಸಾಹಭರಿತರಾಗಿದ್ದಾರೆ.
ಸೆಂಚುರಿ ಸ್ಟಾರ್ ಶಿವಣ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದು, ಚಿತ್ರತಂಡವನ್ನು ಸೇರಿದ್ದಾರೆ. ಸ್ಟಂಟ್ ಮಾಸ್ಟರ್ ರವಿ ವರ್ಮಾ ಕೊರಿಯೋಗ್ರಫಿಯಲ್ಲಿ ಯುದ್ಧ ಸನ್ನಿವೇಶವೊಂದರಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಅವರ ಜೊತೆ ಶ್ರೀಮುರಳಿ ಮತ್ತು ವಶಿಷ್ಟ ಸಿಂಹ ಕೂಡ ಇದ್ದಾರೆ.
ಸಿಟಿ ಎಕ್ಸ್ ಪ್ರೆಸ್ ಗೆ ಚಿತ್ರದ ಕೆಲವು ದೃಶ್ಯಗಳು ಸಿಕ್ಕಿವೆ. ಶಿವಣ್ಣ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿರುವ ಶ್ರೀಮುರಳಿ, ಮುಫ್ತಿ ಬಗ್ಗೆ ಏನಾದರೂ ಹೇಳಬೇಕೆಂದರೆ ಶಿವಣ್ಣ ಮಾಮ ಜೊತೆ ಕೆಲಸ ಮಾಡಲು ಕಾತರವಾಗಿದ್ದು ಮತ್ತು ಪ್ರಯೋಗಾತ್ಮಕ ಕೆಲಸ. ಇದು ನನ್ನ ಅದೃಷ್ಟ ಎಂದು ತಿಳಿದಿದ್ದೇನೆ'' ಎನ್ನುತ್ತಾರೆ.
ಫೈಟಿಂಗ್ ದೃಶ್ಯದಲ್ಲಿ ನಾವಿಬ್ಬರೂ ಇದ್ದು ಸೆಟ್ ನಲ್ಲಿ ಅವರಿದ್ದರೆ ಖುಷಿ ಕೊಡುತ್ತದೆ ಎಂದು ಶ್ರೀ ಮುರಳಿ ಹೇಳುತ್ತಾರೆ.
ತಂಡದ ಸದಸ್ಯರ ಜೊತೆ ಸುಲಭವಾಗಿ ಬೆರೆಯುವ ಅವರ ಸ್ವಭಾವ ಹಿಡಿಸುತ್ತದೆ. ಅವರು ಬೇರೆಯವರನ್ನು ತಿದ್ದುವ ಮನುಷ್ಯ. ನೀವು ತಪ್ಪು ಮಾಡಿದರೆ ಅಥವಾ ಏನಾದರೂ ಸಲಹೆಗಳನ್ನು ಕೊಡಬೇಕೆನಿಸಿದರೆ ಹೇಳಲು ಹಿಂಜರಿಯುವುದಿಲ್ಲ. ಅವರು ಚಿಕ್ಕವರಿದ್ದಾಗಿನಿಂದ ಅವರನ್ನು ನೋಡಿದ್ದೇವೆ. ಅವರ ಸೋದರ ಸಂಬಂಧಿಯೂ ಆಗಿರುವ ನಾನು ಅವರೊಟ್ಟಿಗೆ ಪ್ರಯಾಣಿಸಿದ್ದೇನೆ. ಆದರೆ ಅವರೊಟ್ಟಿಗೆ ಕೆಲಸ ಮಾಡುವುದು ವಿಭಿನ್ನ ಅನುಭವ ಎನ್ನುತ್ತಾರೆ ಮುರಳಿ.
ನಿರ್ದೇಶಕ ನರ್ತನ್ ಅವರ ಚೊಚ್ಚಲ ನಿರ್ದೇಶನದ ಚಿತ್ರವನ್ನು ಜಯಣ್ಣ ಕಂಬೈನ್ಸ್ ನಿರ್ಮಿಸುತ್ತಿದೆ. ರವಿ ಬಸ್ರೂರು ಅವರ ಸಂಗೀತ ಮತ್ತು ನವೀನ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com