ಬೆಂಗಳೂರು: ಯಶಸ್ವಿ ಸಿನೆಮಾ 'ಕಿರಿಕ್ ಪಾರ್ಟಿ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಸಂಯುಕ್ತ ಹೆಗಡೆ ಸದ್ಯಕ್ಕೆ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಬಾಲ್ಯದ ಕನಸು ನನಸಾಗಿರುವುದುದೇ ಈ ಸಂತಸಕ್ಕೆ ಕಾರಣ. "ನಟನೆ ಅದಾಗಿಯೇ ಬಂತು, ಆದರೆ ನಾನು ೮ ವರ್ಷದವಳಾಗಿದ್ದಾಗಿಲಿಂದಲೂ ರೋಡೀಸ್ ನನ್ನ ಕನಸಾಗಿತ್ತು. ರೋಡೀಸ್ ಗೆ ಆಯ್ಕೆಯಾಗಿರುವುದಕ್ಕೆ ನನಗೆ ಅತೀವ ಸಂತಸವಾಗಿದೆ" ಎನ್ನುತ್ತಾರೆ. ಇತ್ತೀಚಿಗೆ ನಡೆದ ಆಡಿಷನ್ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಒಬ್ಬರೇ ಸ್ಪರ್ಧಿ ಸಂಯುಕ್ತ.