ಮುಕ್ತಾಯದತ್ತ '೧/೪ ಕೆಜಿ ಪ್ರೀತಿ'

'೧/೪ ಕೆಜಿ ಪ್ರೀತಿ' ಎಂಬ ಶೀರ್ಷಿಕೆಯಿಂದ ಸಾಕಷ್ಟು ಗಮನ ಸೆಳೆದ ನಿರ್ದೇಶಕ ಸತ್ಯ ಶೌರ್ಯ ಸಾಗರ್ ಈಗ ಸಿನೆಮಾದ ಸಂಗೀತ ಮತ್ತು ಟ್ರೇಲರ್ ಗಳಿಂದ ಕುತೂಹಲವನ್ನು ಹೆಚ್ಚಿಸಿದ್ದಾರೆ.
'೧/೪ ಕೆಜಿ ಪ್ರೀತಿ' ಸಿನೆಮಾ ಸ್ಟಿಲ್
'೧/೪ ಕೆಜಿ ಪ್ರೀತಿ' ಸಿನೆಮಾ ಸ್ಟಿಲ್
ಬೆಂಗಳೂರು: '೧/೪ ಕೆಜಿ ಪ್ರೀತಿ' ಎಂಬ ಶೀರ್ಷಿಕೆಯಿಂದ ಸಾಕಷ್ಟು ಗಮನ ಸೆಳೆದ ನಿರ್ದೇಶಕ ಸತ್ಯ ಶೌರ್ಯ ಸಾಗರ್ ಈಗ ಸಿನೆಮಾದ ಸಂಗೀತ ಮತ್ತು ಟ್ರೇಲರ್ ಗಳಿಂದ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಯೋಗರಾಜ್ ಮೂವೀಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಸಿನೆಮಾದ ಬಿಡುಗಡೆಗೆ ಎದುರು ನೋಡುತ್ತಿರುವ ನಿರ್ದೇಶಕ '೧/೪ ಕೆಜಿ ಪ್ರೀತಿ' ಪ್ರೀತಿಗಾಗಿ ಸದ್ಯಕ್ಕೆ ತಮ್ಮ ಸಾರ್ವಜನಿಕ ವಲಯದ ಸಂಸ್ಥೆಯ ಉದ್ಯೋಗದಿಂದ ಬಿಡುವು ಪಡೆದುಕೊಂಡಿದ್ದಾರೆ, "ನಾನು ಸಹನಿರ್ದೇಶಕನಾಗಿ ದುಡಿದ ೧೦ ವರ್ಷಗಳ ಅನುಭವವನ್ನು ನನ್ನ ಮೊದಲ ಸ್ವತಂತ್ರ ಚಿತ್ರಕ್ಕೆ ಧಾರೆಯೆರೆದಿದ್ದೇನೆ. ಎಲ್ಲರು ಪ್ರೀತಿಯಲ್ಲಿ ಬೀಳುತ್ತಾರೆ ಆದರೆ ಎಷ್ಟೋ ಬಾರಿ ಅದನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಪ್ರೀತಿಯನ್ನು ವ್ಯಕ್ತಪಡಿಸುವುದರ ಬಗ್ಗೆ ನನ್ನ ಸಿನೆಮಾ ಚರ್ಚಿಸುತ್ತದೆ. ಮೊದಲು ನನ್ನ ಸಿನೆಮಾವನ್ನು 'ಸ್ಟಾರ್ಟಿಂಗ್ ಟ್ರಬಲ್' ಎಂದು ಹೆಸರಿಸಲು ಬಯಸಿದ್ದೆ ಆದರೆ ಯೋಗರಾಜ್ ಭಟ್ ಅವರು 'ಕಾಲ್ ಕೆಜಿ ಪ್ರೀತಿ' ಹೆಸರನ್ನು ಸೂಚಿಸಿದರು. ಇದನ್ನು ಬಹುತೇಕ ಜನ ಅನುಮೋದಿಸಿದರು" ಎಂದು ವಿವರಿಸುತ್ತಾರೆ ಸತ್ಯ. 
ಈ ಸಿನೆಮಾ ಬಹುತೇಕ ಪ್ರವಾಸ ದೃಶ್ಯಗಳಿಂದ ಕೂಡಿರುವುದರಿಂದ ಸಿನೆಮಾದ ಬಹುತೇಕ ಭಾಗವನ್ನು ಕಾರ್ ಢಿಕ್ಕಿಯಿಂದಲೇ ಚಿತ್ರೀಕರಿಸಲಾಗಿದೆಯಂತೆ. "ನಾವು ಸಾಕಷ್ಟು ಪ್ರವಾಸ ಮಾಡಬೇಕಾಗಿ ಬಂತು ಮತ್ತು ಕ್ಯಾಮರಾ ಚಲಿಸುತ್ತಲೇ ಇತ್ತು. ಇದನ್ನು ಈ ಹಿಂದೆ ಬೇರೆ ಯಾವ ನಿರ್ದೇಶಕನಾದರೂ ಮಾಡಿದ್ದಾರೆಯೇ ತಿಳಿಯದು. ಇದು ಒಳ್ಳೆಯ ಅನುಭವವಾಗಿತ್ತು" ಎನ್ನುತ್ತಾರೆ ಸತ್ಯ. 
ಈ ಸಿನೆಮಾದಲ್ಲಿ ಹೊಸ ಮುಖಗಳಾದ ವಿಹಾನ್ ಗೌಡ ಮತ್ತು ಹಿತ ಚಂದ್ರಶೇಖರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಹಲವು ಸುತ್ತುಗಳ ಆಡಿಷನ್ ಬಳಿಕ ಈ ಜೋಡಿ ನನ್ನ ಸಿನೆಮಾಗೆ ಸೂಕ್ತ ಎಂದು ಕಂಡುಕೊಂಡೆ. ಹೊಸ ಮುಖಗಳನ್ನು ಆಯ್ಕೆ ಮಾಡಿಕೊಂಡದ್ದರಿಂದ ಸಿನೆಮಾ ಪ್ರಾರಂಭಿಸುವುದು ಸುಲಭವಾಗಿತ್ತು" ಎನ್ನುತ್ತಾರೆ. 
ಎಬಿ ರಾಜೀವ್ ಈ ಸಿನೆಮಾ ನಿರ್ಮಿಸಿದ್ದು ಮೈಸೂರು ಟಾಕೀಸ್ ಇದನ್ನು ವಿತರಿಸುತ್ತಿದೆ. "ನನ್ನ ಚೊಚ್ಚಲ ಚಿತ್ರವನ್ನು ನಿರ್ದೇಶಕ ಯೋಗರಾಜ್ ಭಟ್ ಸಹಕರಿಸುತ್ತಿರುವುದಕ್ಕೆ ಸಂತಸವಿದೆ" ಎನ್ನುತ್ತಾರೆ ಸತ್ಯ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com