'ಮಾಂಝಾ' ಸಿನೆಮಾದಲ್ಲಿ ನಟಿ ಅನಿಶ್ ತೇಜೇಶ್ವರ್ ಎದುರು ನಟಿಸುತ್ತಿದ್ದಾರೆ. ಕೇವಲ ಸ್ಟಾರ್ ನಟರೊಂದಿಗೆ ಮಾತ್ರ ದೀಪಾ ನಟಿಸುವುದು ಎಂಬ ಗ್ರಹಿಕೆಯನ್ನು ಮುರಿಯಲು ದೀಪಾ ಮುಂದಾಗಿದ್ದಾರೆ. "ಕನ್ನಡ ಸಿನೆಮಾ ಉದ್ಯಮದಲ್ಲಿ ನನ್ನ ಬಗ್ಗೆ ತಪ್ಪುಗ್ರಹಿಕೆಯಿದೆ. ನಾನು ಸ್ಟಾರ್ ನಟರೊಂದಿಗೆ ಮಾತ್ರ ನಟಿಸಲು ಬಯಸುತ್ತೇನೆ ಎಂದು ಅವರು ತಿಳಿದಿದ್ದಾರೆ. ನಾನು ಹೊಸಬರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ತಪ್ಪಾಗಿ ತಿಳಿದಿರುವ ಎಷ್ಟೋ ಜನ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನನ್ನು ಕೇಳಲು ಎರಡು ಬಾರಿ ಚಿಂತಿಸುತ್ತಾರೆ ಎಂದು ಆಂತರಿಕ ಮೂಲಗಳಿಂದ ತಿಳಿದಿದ್ದೇನೆ. ಆದರೆ ಹಾಗೇನಿಲ್ಲ. ನಾನು ತಾಜಾ ವಿಷಯಗಳು ಮತ್ತು ಪಾತ್ರಗಳಲ್ಲಿ ನಟಿಸಲು, ಹೊಸ ತಂಡಗಳೊಂದಿಗೆ ಕೆಲಸ ಮಾಡಲು ಸದಾ ಸಿದ್ದ" ಎನ್ನುತ್ತಾರೆ.