'ಕೊನೆಗೂ ಕನ್ನಡದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು': ಅಕ್ಷರ ಗೌಡ

ಅಕ್ಷರ ಗೌಡ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ 'ಪ್ರೇಮದಲ್ಲಿ', ಎಂಜಿನಿಯರ್ ವೃತ್ತಿ ತೊರೆದು ಚಲನಚಿತ್ರ ನಿರ್ದೇಶಕನಾಗಿರುವ ಹರಿಪ್ರಸಾದ್ ಜಯಣ್ಣ ಅವರ ಮೊದಲ ಚಿತ್ರ ಕೂಡ. ಹರಿ
ಅಕ್ಷರ ಗೌಡ
ಅಕ್ಷರ ಗೌಡ
Updated on
ಬೆಂಗಳೂರು: ಅಕ್ಷರ ಗೌಡ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ 'ಪ್ರೇಮದಲ್ಲಿ', ಎಂಜಿನಿಯರ್ ವೃತ್ತಿ ತೊರೆದು ಚಲನಚಿತ್ರ ನಿರ್ದೇಶಕನಾಗಿರುವ ಹರಿಪ್ರಸಾದ್ ಜಯಣ್ಣ ಅವರ ಮೊದಲ ಚಿತ್ರ ಕೂಡ. ಹರಿ ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದವರು. ಮಾಡೆಲ್ ಲೋಕದಿಂದ ನಟನೆಗೆ ಜಿಗಿದಿರುವ ಅಮೀತ ಕೌಲ್ ಕೂಡ ಚಲನಚಿತ್ರದ ಭಾಗವಾಗಿದ್ದಾರೆ. 
ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ನಿರ್ದೇಶನ ತರಬೇತಿ ಪಡೆದಿದ್ದ ಅಕ್ಷರ ತಮಿಳಿನ 'ಉಯರಿತಿರು ೪೨೦' ಸಿನೆಮಾದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿ, 'ರಂಗ್ರೆಜ್' ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. 'ತುಫಾಕಿ', 'ಇರಂಬು ಕೂತಿರೈ' ಸಿನೆಮಾಗಳಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದ ನಟಿ, ತಮ್ಮ ಮುಂದಿನ ಸಿನೆಮಾ 'ಭೋಗನ್' ಎದುರುನೋಡುತ್ತಿದ್ದಾರೆ. ಪ್ರಭುದೇವ ಮತ್ತು ಡಾ. ಕೆ ಗಣೇಶ್ ನಿರ್ಮಾಣದ ಈ ಚಿತ್ರದಲ್ಲಿ, ಜಯಂ ರವಿ, ಹಂಸಿಕಾ ಮೋಟ್ವಾನಿ ಮತ್ತು ಅರವಿಂದ್ ಸ್ವಾಮಿ ನಟಿಸುತ್ತಿದ್ದಾರೆ. ಅಲ್ಲದೆ 'ಮಾಯಾವನ್' ಮತ್ತು 'ಸಂಗಿಲಿ ಬುಂಗಿಲಿ ಕಧ್ ಆವಾ ತೊರೆ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. 
ಹಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುವ ಆಸೆ ಹೊತ್ತಿದ್ದ ನಟಿ, ಈಗ ಪಾದಾರ್ಪಣೆಗೆ ಉತ್ಸುಕರಾಗಿದ್ದಾರೆ. "೨೦೧೭ ನನಗೆ ಉತ್ತಮ ಆರಂಭ" ಎನ್ನುತ್ತಾರೆ. ವಿಶೇಷ ಎಂದರೆ ನಿರ್ದೇಶಕರ ಜೊತೆಗೆ ಒಂದೇ ಅಕಾಡೆಮಿಯಲ್ಲಿ ಇವರಿಬ್ಬರು ಅಧ್ಯಯನ ಮಾಡಿರುವುದು. "ಹರಿಪ್ರಸಾದ್ ೨೦೧೧ ರಲ್ಲಿ ಉತ್ತೀರ್ಣಯರಾದರೆ ನಾನು ೨೦೧೪ ರಲ್ಲಿ ಅಕಾಡೆಮಿಯಿಂದ ಹೊರಬಂದೆ" ಎನ್ನುತ್ತಾರೆ ನಟಿ. 
ತೆಲುಗಿನಲ್ಲಿಯೂ ಪಾದಾರ್ಪಣೆ ಮಾಡಲಿರುವ ನಟಿ, ವಿವರಗಳನ್ನು ಅಧಿಕೃತ ಘೋಷಣೆಯ ನಂತರ ನೀಡುವುದಾಗಿ ಹೇಳುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com