
ಬೆಂಗಳೂರು: ಇಬ್ಬರು ಖಳನಾಯಕರ ದುರಂತ ಅಂತ್ಯದ ನಂತರ ಮಾಸ್ತಿ ಗುಡಿ ಸಿನಿಮಾ ತಂಡ ಚಿತ್ರದ ಶೂಟಿಂಗ್ ಮುಗಿಸಲು ಸಿದ್ಧತೆ ನಡೆಸಿದೆ. ಮೂರು ದಿನಗಳ ಶೂಟಿಂಗ್ ಉಳಿದಿದ್ದು, ಅಂತಿಮ ಹಂತದ ಚಿತ್ರೀಕರಣವನ್ನು ಇನ್ನು ಕೆಲವೇ ದಿನಗಳಲ್ಲಿ ಮುಗಿಸುವುದಾಗಿ ತಿಳಿಸಿದೆ.
ನಡೆದ ಘಟನೆಯಿಂದ ನಾವಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ, ಸಿನಿಮಾವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮಾಸ್ತಿಗುಡಿ ಶೂಟಿಂಗ್ ಪೂರ್ಣಗೊಳಿಸಬೇಕಾಗಿದೆ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.
ನಾಗಶೇಖರ್ ನಿರ್ದೇಶನದ ಮಾಸ್ತಿಗುಡಿ ಸಿನಿಮಾವನ್ನು ಸುಂದರ್ ಪಿ ಗೌಡ್ರು ನಿರ್ಮಾಣ ಮಾಡಿದ್ದಾರೆ. ದುನಿಯಾ ವಿಜಯ್, ಕೃತ ಕರಬಂಧ, ಅಮೂಲ್ಯ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಮಾಸ್ತಿಗುಡಿ ಚಿತ್ರದ ಶೂಟಿಂಗ್ ಪೂರ್ಣಗೊಂಡ ನಂತರ ವಿಜಯ್ ಕನಕ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೋಳ್ಳಲಿದ್ದಾರೆ.
Advertisement