ದುರಂತದಿಂದ ಸ್ಫೂರ್ತಿ ಪಡೆದ 'ಎಚ್/೩೪ ಪಲ್ಲವಿ ಟಾಕೀಸ್'

ನಿರ್ದೇಶಕ ಶ್ರೀನಿವಾಸ ಗೌಡ ಅಕಾ ಸೀನಿ ತಮ್ಮ ಮುಂದಿನ ಚಿತ್ರ 'ಎಚ್/೩೪ ಪಲ್ಲವಿ ಟಾಕೀಸ್' ಚಿತ್ರೀಕರಣ ಮುಗಿಸಿದ್ದಾರೆ. ಸಿನೆಮಾ ವೀಕ್ಷಿಸುವಾಗ ನಡೆದ ಒಂದು ದುರದೃಷ್ಟಕರ ಘಟನೆಯೇ ಈ ಸಿನೆಮಾಗೆ ಸ್ಫೂರ್ತಿ
'ಎಚ್/೩೪ ಪಲ್ಲವಿ ಟಾಕೀಸ್' ಸಿನೆಮಾದಲ್ಲಿ ತಿಲಕ್
'ಎಚ್/೩೪ ಪಲ್ಲವಿ ಟಾಕೀಸ್' ಸಿನೆಮಾದಲ್ಲಿ ತಿಲಕ್
ಬೆಂಗಳೂರು: ನಿರ್ದೇಶಕ ಶ್ರೀನಿವಾಸ ಗೌಡ ಅಕಾ ಸೀನಿ ತಮ್ಮ ಮುಂದಿನ ಚಿತ್ರ  'ಎಚ್/೩೪ ಪಲ್ಲವಿ ಟಾಕೀಸ್' ಚಿತ್ರೀಕರಣ ಮುಗಿಸಿದ್ದಾರೆ. ಸಿನೆಮಾ ವೀಕ್ಷಿಸುವಾಗ ನಡೆದ ಒಂದು ದುರದೃಷ್ಟಕರ ಘಟನೆಯೇ ಈ ಸಿನೆಮಾಗೆ ಸ್ಫೂರ್ತಿ ಎನ್ನುತ್ತಾರೆ ನಿರ್ದೇಶಕ. 
ಆಗಸ್ಟ್ ೫, ೨೦೧೩ ರಂದು 'ಕಂಜ್ಯುರಿಂಗ್' ಸಿನೆಮಾ ನೋಡುವಾಗ ಈ ಸಿನೆಮಾದ ಪ್ಲಾಟ್ ಹೊಳೆಯಿತು ಎನ್ನುತ್ತಾರೆ ನಿರ್ದೇಶಕ ಸೀನಿ. "ಗೆಳೆಯ ಮತ್ತು ನಿರ್ದೇಶಕ ಸುನಿ ಜೊತೆಗೆ ಸಿನೆಮಾ ನೋಡಲು ಥಿಯೇಟರ್ ಗೆ ಹೋಗಿದ್ದೆ. ಈ ಸಿನೆಮಾ ನೋಡುವಾಗ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಯಿತು. ಅದು ಮುಂದಿನ ದಿನ ಸುದ್ದಿಯಾಗಿಯೂ ಪ್ರಕಟವಾಯಿತು. ಮೊದಲು, ಆ ಚಿತ್ರಮಂದಿರದ ಹೆಸರನ್ನೇ ಶೀರ್ಷಿಕೆ ಮಾಡಿದ್ದೆ, ಆದರೆ ವಾಣಿಜ್ಯ ಮಂಡಳಿ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ನಂತರ ಪಲ್ಲವಿ ಟಾಕೀಸ್ ಅನ್ನು ಉರುಳಿಸಲಾಯಿತು. ಆಗ ಮತ್ತೆ ಈ ಹೆಸರನ್ನು ಒಳಗೊಂಡೆ" ಎಂದು ವಿವರಿಸುತ್ತಾರೆ. 
ಈ ಘಟನೆ ನಡೆದಾಗ ಅದೇ ಥಿಯೇಟರ್ ನಲ್ಲಿ 'ಉಗ್ರಂ' ಸಿನೆಮಾದ ಸಂಕಲನಕಾರ ಶ್ರೀಕಾಂತ್ ಕೂಡ ಸಿನೆಮಾ ನೋಡುತ್ತಿದ್ದರಂತೆ. "ಆದುದರಿಂದ ಈ ಸಿನೆಮಾದ ಒಂದು ಸಾಲಿನ ಕಥೆ ಹೊಳೆದಾಗ, ಅವರ ಅನುಭವವನ್ನು ಒಳಗೊಂಡೆ" ಎನ್ನುತ್ತಾರೆ ನಿರ್ದೇಶಕ.
ಈ ಹಾರರ್ ಸಿನೆಮಾ ಈ ನಿಜ ಘಟನೆಯನ್ನು ಒಳಗೊಂಡು ಅಲ್ಲಿಂದ ಮುಂದುವರೆಯಲಿದೆಯಂತೆ. "ಆ ಘಟನೆಯ ನಂತರ ಕಥೆ ಮುಂದುವರೆಯುತ್ತದೆ. ವಿಶ್ವದ ಹಲವು ಭಯಂಕರ ಘಟನೆಗಳಿಂದ ಸ್ಫೂರ್ತಿ ಪಡೆದ ಸೈಕೋ ಥ್ರಿಲ್ಲರ್ ಇದು" ಎನ್ನುತ್ತಾರೆ ಶ್ರೀನಿವಾಸ್. 
ತಿಲಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಯಜ್ಞ ಶೆಟ್ಟಿ, ಅಚ್ಯುತ್ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಪದ್ಮಜಾ ರಾವ್ ಮತ್ತು ಅಮೃತಾ ಮುಂತಾದವರು ತಾರಾಗಣದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com