೫೦ ಒಳ್ಳೆಯದು, ಆದರೆ ೧೦೦ ಆಗಿದ್ದರೆ ಇನ್ನು ಉತ್ತಮವಾಗಿರುತ್ತಿತ್ತು: ದ್ವಾರಕೀಶ್

ಬಹುತೇಕ ಎಲ್ಲ ನಟರು ನಿರ್ಮಾಪಕನಾಗುತ್ತಿರುವ ಕಾಲ ಇದು. ಆದರೆ ಐದು ದಶಕಗಳ ಕೆಳಗೆ ಪರಿಸ್ಥಿತಿ ಹೀಗಿರಲಿಲ್ಲ. ಅಂತಹ ಕಾಲದಲ್ಲಿಯೇ ನಟನೆ, ನಿರ್ದೇಶನ ಮತ್ತು ನಿರ್ಮಾಣಕ್ಕೂ ಸೈ ಎಂದಿದ್ದ ಹಾಸ್ಯ ನಟ
ಹಿರಿಯ ನಟ ದ್ವಾರಕೀಶ್
ಹಿರಿಯ ನಟ ದ್ವಾರಕೀಶ್
ಬೆಂಗಳೂರು: ಬಹುತೇಕ ಎಲ್ಲ ನಟರು ನಿರ್ಮಾಪಕನಾಗುತ್ತಿರುವ ಕಾಲ ಇದು. ಆದರೆ ಐದು ದಶಕಗಳ ಕೆಳಗೆ ಪರಿಸ್ಥಿತಿ ಹೀಗಿರಲಿಲ್ಲ. ಅಂತಹ ಕಾಲದಲ್ಲಿಯೇ ನಟನೆ, ನಿರ್ದೇಶನ ಮತ್ತು ನಿರ್ಮಾಣಕ್ಕೂ ಸೈ ಎಂದಿದ್ದ ಹಾಸ್ಯ ನಟ ದ್ವಾರಕೀಶ್ ತಮ್ಮ ನಿರ್ಮಾಣದ ೫೦ ನೆಯ ಸಿನೆಮಾ 'ಚೌಕ' ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. 
ಮೊದಲ ಸಿನೆಮಾ 'ಮಮತೆಯ ಬಂಧನ' ನಿರ್ಮಿಸಿದಾಗ ತಮಗೆ ೨೩ ವರ್ಷ ಎಂದು ನೆನಪಿಸಿಕೊಳ್ಳುವ ದ್ವಾರಕೀಶ್ "ನನ್ನ ಬ್ಯಾನರ್ ಅಡಿ ೫೦ ನೆಯ ಸಿನೆಮಾ ನಿರ್ಮಿಸಿರುವುದಕ್ಕೆ ಖುಷಿ ಇದೆ. ಇದೆ ಸಮಯದಲ್ಲಿ ೧೦೦ ಚಿತ್ರಗಳ ಗುರಿ ತಲುಪಲಾಗಿಲ್ಲವೆಲ್ಲ ಎಂಬ ಅಸಮಾಧಾನವೂ ಇದೆ. ೧೦೦ ಆಗಿದ್ದರೆ ಇನ್ನು ಉತ್ತಮವಾಗಿರುತ್ತಿತ್ತು, ಆದರೆ ೧೮ ವರ್ಷಗಳ ಕಾಲ ನಾನು ಕಷ್ಟದ ಸಮಯ ಕಳೆದೆ" ಎನ್ನುತ್ತಾರೆ. 
ಇವೆಲ್ಲವೂ ಹಣೆಬರಹ ಎನ್ನುವ ಹಿರಿಯ ನಟ, ತಮ್ಮ ಪುತ್ರ ಯೋಗಿ ನಿರ್ಮಾಪಕನ ಸ್ಥಾನ ಅಲಂಕರಿಸಿ ಪರಂಪರೆಯನ್ನು ಮುಂದುವರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. "೧೯೬೫ ರಿಂದಲೂ ಈ ನಿರ್ಮಾಣ ಸಂಸ್ಥೆ ಇದ್ದು, ಆಗಿಲಿಂದಲೂ ನಾವು ಸಿನೆಮಾಗಳನ್ನು ನಿರ್ಮಿಸುತ್ತಿದ್ದೇವೆ. ೫೨ ವರ್ಷಗಳಿಂದ ನಾವು ತೆರೆಯ ಮೇಲಿದ್ದೇವೆ. ಕನ್ನಡ ಪ್ರೇಕ್ಷಕರ ಈ ಬೆಂಬಲಕ್ಕೆ ನಾನು ಋಣಿ. ಡಾ. ರಾಜಕುಮಾರ್, ವಿಷ್ಣುವರ್ಧನ್, ರಜನಿಕಾಂತ್, ಕೆ ಎಸ ಎಲ್ ಸ್ವಾಮಿ ಇವೆರೆಲ್ಲರ ಸಹಕಾರವನ್ನು ಕೂಡ ನೆನೆಯುತ್ತೇನೆ. ನನ್ನೆಲ್ಲ ಸಹದ್ಯೋಗಿಗಳಿಗೂ ಧನ್ಯವಾದ ಹೇಳಬೇಕು. ನಾನು ಎಲ್ಲರನ್ನು ನೆನೆಯುತ್ತೇನೆ" ಎನ್ನುತ್ತಾರೆ ದ್ವಾರಕೀಶ್. 
೧೯೬೨ ರಲ್ಲಿ ಚಿತ್ರರಂಗ ಪ್ರವೇಶಿಸಿದ ದ್ವಾರಕೀಶ್, ಆಗ ನಟರು ಸಿನೆಮಾಗಳನ್ನು ನಿರ್ಮಿಸುತ್ತಿದ್ದು ಅತಿ ವಿರಳ ಎನ್ನುತ್ತಾರೆ. "ನಾನು ಮತ್ತೊಬರ ಜೊತೆಗೆ ೧೯೬೫ ರಲ್ಲಿ ಸಿನೆಮಾ ನಿರ್ಮಿಸಿದಾಗ, ಆ ಯವ್ವನದ ತೀವ್ರತೆಯಲ್ಲಿ ಮಾಡಿದ್ದು" ಎನ್ನುತ್ತಾರೆ. 
ಹೂಡಿಕೆಯ ಬಗ್ಗೆ ಬಹಳ ಎಚ್ಚರಿಕೆಯಿಂದ್ದರು, ರಾಜಕುಮಾರ್ ನಟಿಸಿದ ಮೇಯರ್ ಮುತ್ತಣ್ಣ ಸೇರಿದಂತೆ ಹಲವು ಹಿಟ್ ಸಿನೆಮಾಗಳನ್ನು ನಿರ್ಮಿಸಿರುವ ಖ್ಯಾತಿ ಅವರದ್ದು. 'ಭಾಗ್ಯವಂತರು', 'ಸಿಂಗಾಪುರದಲ್ಲಿ ರಾಜ ಕುಳ್ಳ', 'ಮಂಕು ತಿಮ್ಮ', 'ಪೆದ್ದ ಗೆದ್ದ', 'ಆಪ್ತಮಿತ್ರ', 'ವಿಷ್ಣುವರ್ಧನ' ಮತ್ತು 'ಆಟಗಾರ' ಕೂಡ ಪ್ರಮುಖವಾದವು. 
"ಕಾದಂಬರಿ ಆಧಾರಿತ ಚಿತ್ರಗಳನ್ನು ನನಗೆ ಮಾಡಲಾಗಿಲ್ಲ ಎಂಬುದು ಸದಾ ಕಾಡುತ್ತದೆ" ಎನ್ನುತ್ತಾರೆ ದ್ವಾರಕೀಶ್. 
ಚೌಕ ವಿಭಿನ್ನ ಸಿನೆಮಾ ಎನ್ನುವ ದ್ವಾರಕೀಶ್ "ತರುಣ್ ಸುಧೀರ್ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿರುವ ಈ ಚಿತ್ರದಲ್ಲಿ ನಾಲ್ಕು ಹೀರೋಗಳು ಮತ್ತು ಹೀರೋಯಿನ್ ಗಳಿದ್ದಾರೆ. ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗು ಪುನೀತ್ ರಾಜಕುಮಾರ್ ಹಾಡೊಂದನ್ನು ಹಾಡಿದ್ದಾರೆ. ಈ ಸಿನೆಮಾದ ಮತ್ತೊಂದು ವಿಶೇಷ ಎಂದರೆ ತಂತ್ರಜ್ಞ ತಂಡದಲ್ಲಿ ಐವರು ಬರಹಗಾರರು, ಸಂಗೀತ ನಿರ್ದೇಶಕರು, ನೃತ್ಯ ನಿರ್ದೇಶಕರು ಮತ್ತು ಸಿನೆಮ್ಯಾಟೋಗ್ರಾಫರ್ ಗಳು ಇದ್ದಾರೆ. ನಮ್ಮ ೫೦ ಚಿತ್ರ ದೊಡ್ಡ ಹೆಸರು ಮಾಡುತ್ತದೆ ಎಂದು ನಂಬಿದ್ದೇನೆ" ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com