ಇಡೀ ಚಿತ್ರರಂಗ ಶೀಘ್ರದಲ್ಲಿಯೇ ಒಗ್ಗಟ್ಟಿನ ಧ್ವನಿ ಎತ್ತಲಿದೆ: ಕಮಲ್ ಹಾಸನ್

ಹೊಸದಾಗಿ ಜಾರಿ ಮಾಡಿರುವ ತೆರಿಗೆ ನೀತಿ ಜಿ ಎಸ್ ಟಿಯಲ್ಲಿ ಮನರಂಜನಾ ತೆರಿಗೆಯನ್ನು ೩೦%ಗೆ ಏರಿಸಿರುವುದನ್ನು ವಿರೋಧಿಸಿ ತಮಿಳುನಾಡಿನ ಚಿತ್ರಮಂದಿರಗಳು ಬಂದ್ ಮಾಡುತ್ತಿರುವ ಹಿನ್ನಲೆಯಲ್ಲಿ,
ಕಮಲ್ ಹಾಸನ್
ಕಮಲ್ ಹಾಸನ್
ಚೆನ್ನೈ: ಹೊಸದಾಗಿ ಜಾರಿ ಮಾಡಿರುವ ತೆರಿಗೆ ನೀತಿ ಜಿ ಎಸ್ ಟಿಯಲ್ಲಿ ಮನರಂಜನಾ ತೆರಿಗೆಯನ್ನು ೩೦%ಗೆ ಏರಿಸಿರುವುದನ್ನು ವಿರೋಧಿಸಿ ತಮಿಳುನಾಡಿನ ಚಿತ್ರಮಂದಿರಗಳು ಬಂದ್ ಮಾಡುತ್ತಿರುವ ಹಿನ್ನಲೆಯಲ್ಲಿ, ತಮಿಳು ಚಿತ್ರರಂಗ ಒಗ್ಗೂಡಿದ ಧ್ವನಿಯಲ್ಲಿ ಮಾತನಾಡಲಿದೆ ಎಂದು ಸೋಮವಾರ ನಟ-ನಿರ್ದೇಶಕ ಕಮಲ್ ಹಾಸನ್ ಹೇಳಿದ್ದಾರೆ. 
ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ಜುಲೈ ೧ ರಿಂದ ಜಾರಿಯಾಗಿದೆ. 
ಡಬ್ಬಿಂಗ್ ಸ್ಟುಡಿಯೋಗೆ ಚಾಲನೆ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಕಮಲ್ "ಇಡೀ ಚಿತ್ರರಂಗ ಒಗ್ಗೂಡುತ್ತಿದೆ ಮತ್ತು ಶೀಘ್ರದಲ್ಲೆ ಒಂದೇ ಧ್ವನಿಯಲ್ಲಿ ಮಾತನಾಡಲಿದ್ದೇವೆ" ಎಂದಿದ್ದಾರೆ. 
ದ್ವಿಮುಖ ತೆರಿಗೆ ವಿರೋಧಿಸಿ ತಮಿಳುನಾಡಿನಾದ್ಯಂತ ಇಂದು ಚಿತ್ರಮಂದಿರ ಮಾಲೀಕರು ಬಂದ್ ಮಾಡಿ ಪ್ರತಿಭಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com