'ಮುಗುಳು ನಗೆ' ಆಡಿಯೋ ಹಕ್ಕುಗಳನ್ನು ಭಾರಿ ಬೆಲೆಗೆ ಖರೀದಿಸಿದ ಡಿ ಬೀಟ್ಸ್

ಜಿ ಎಸ್ ಟಿ ಹಲವು ಉದ್ಯಮಿಗಳಿಗೆ ತುಸು ತಲೆಬಿಸಿಯುಂಟು ಮಾಡಿದ್ದರೂ, ಜಿ ಎಸ್ ಟಿ ಹಾಡಿನ ಮೂಲಕ ಪ್ರಚಾರ ಗಿಟ್ಟಿಸಿಕೊಂಡ 'ಮುಗುಳು ನಗೆ' ಚಿತ್ರತಂಡ ಸಂತಸದಲ್ಲಿದೆ. ಬ್ಲಾಕ್ಬಸ್ಟರ್ ಜೋಡಿ
ಮುಗುಳು ನಗೆ ಪೋಸ್ಟರ್
ಮುಗುಳು ನಗೆ ಪೋಸ್ಟರ್
ಬೆಂಗಳೂರು: ಜಿ ಎಸ್ ಟಿ ಹಲವು ಉದ್ಯಮಿಗಳಿಗೆ ತುಸು ತಲೆಬಿಸಿಯುಂಟು ಮಾಡಿದ್ದರೂ, ಜಿ ಎಸ್ ಟಿ ಹಾಡಿನ ಮೂಲಕ ಪ್ರಚಾರ ಗಿಟ್ಟಿಸಿಕೊಂಡ 'ಮುಗುಳು ನಗೆ' ಚಿತ್ರತಂಡ ಸಂತಸದಲ್ಲಿದೆ. ಬ್ಲಾಕ್ಬಸ್ಟರ್ ಜೋಡಿ ಎಂದೇ ಪ್ರಖ್ಯಾತವಾದ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜೋಡಿಯ 'ಮುಗುಳು ನಗೆ' ಆಡಿಯೋ ಹಕ್ಕುಗಳನ್ನು ಭಾರಿ ಬೆಲೆಗೆ ಮಾರಾಟ ಮಾಡಿ ಮುಗುಳುನಗೆ ಬೀರಿದ್ದಾರೆ. 
'ಹೊಡಿ ಒಂಬತ್ತು' ಜಿ ಎಸ್ ಟಿ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ವಿ ಹರಿಕೃಷ್ಣ, ಗಣೇಶ್ ಮತ್ತು ದುನಿಯಾ ವಿಜಯ್ ಕಂಠದಾನ ಮಾಡಿದ್ದರು. ಈ ಹಾಡು ವೈರಲ್ ಆದ ಹಿನ್ನಲೆಯಲ್ಲಿತೆ ಡಿ ಬೀಟ್ಸ್ ಸಂಸ್ಥೆ ಸಿನೆಮಾದ ಆಡಿಯೋ ಹಕ್ಕುಗಳನ್ನು ಭಾರಿ ಬೆಲೆಗೆ ಖರೀದಿಸಿವೆಯಂತೆ. ಆಡಿಯೋ ಬಿಡುಗಡೆ ಜುಲೈ ೧೨ ಕ್ಕೆ ನೆರವೇರಲಿದೆ. 
ಸದ್ಯಕ್ಕೆ ಸಿನೆಮಾ ಚಿತ್ರೀಕರಣ ನಂತರದ ಕೆಲಸಗಳಲ್ಲಿ ನಿರತವಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಸಯ್ಯದ್ ಸಲಾಂ, ಯೋಗರಾಜ್ ಭಟ್ ಮತ್ತು ಗಣೇಶ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಅಪೂರ್ವ, ಆಶಿಕಾ ರಂಗನಾಥನ್, ನಿಕಿತಾ ನಾರಾಯಣ್ ಮತ್ತು ಅಮೂಲ್ಯ ನಾಯಕನಟಿಯರು. ಸುಜ್ಞಾನ್ ಸಿನೆಮ್ಯಾಟೋಗ್ರಾಫರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com