ಜು.12 ರಂದು ಶಿಲ್ಪಾ ಗಣೇಶ್ ಜನ್ಮದಿನದ ಅಂಗವಾಗಿ ಬೆಂಗಳೂರಿನಲ್ಲಿ 2 ನೇ ಹಾಡನ್ನು ಗಣೇಶ್ ಅವರ ಮನೆಯಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಜು.14 ರಂದು ಮೈಸೂರು ನಂತರ ದಾವಣಗೆರೆಗೆ ಚಿತ್ರ ತಂಡ ತೆರಳಲಿದ್ದು, ಜುಲೈ 21, 22 ರ ವೇಳೆಗೆ ಆಡಿಯೋ ಬಿಡುಗಡೆ ಕಾರ್ಯಕ್ರಮ ಸಂಪೂರ್ಣವಾಗಲಿದೆ. ಇದೇ ವೇಳೆ ಮುಂಗಾರು ಮಳೆಯ 10 ವರ್ಷಾಚರಣೆಯ ಭಾಗವಾಗಿ ಗಣೇಶ್ ಹಾಗೂ ಯೋಗರಾಜ್ ಭಟ್ ಅವರು ಜೋಗ್ ಫಾಲ್ಸ್ ಗೆ ಭೇಟಿ ನೀಡಲಿದ್ದಾರೆ.