ಇಂದು ಸರ್ಕಾರ್ ಟ್ರೇಲರ್ ವಿರುದ್ಧ ಸಂಜಯ್ ಗಾಂಧಿ ಪುತ್ರಿ ಆಕ್ರೋಶ

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಕಿರಿಯ ಪುತ್ರ ಸಂಜಯ್‌ ಗಾಂಧಿ ಅವರ ಮಗಳು ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು, ‘ಇಂದು ಸರ್ಕಾರ್‌’ ...
ಪ್ರಿಯಾ ಸಿಂಗ್ ಪೌಲ್
ಪ್ರಿಯಾ ಸಿಂಗ್ ಪೌಲ್
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಕಿರಿಯ ಪುತ್ರ ಸಂಜಯ್‌ ಗಾಂಧಿ ಅವರ ಮಗಳು ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು,  ‘ಇಂದು ಸರ್ಕಾರ್‌’ ಚಲನಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ ನಾಯಕರಾಗಿದ್ದ ತಮ್ಮ ತಂದೆ ಹಾಗೂ ಇಂದಿರಾ ಗಾಂಧಿ ಅವರನ್ನು ಚಿತ್ರದಲ್ಲಿ ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಿನಿಮಾ ಟ್ರೈಲರ್ ನೋಡಿ ನನಗೆ ಆಘಾತವಾಯಿತು. ಒಂದು ದೃಶ್ಯದಲ್ಲಿ ಮಿಸ್ ಲೀಡ್ ಮಾಡಲಾಗಿದೆ. ನಾನು ಸಂಜಯ್ ಗಾಂಧಿ ಅವರನ್ನು ಒಮ್ಮೆ ಭೇಟಿ ಮಾಡಿದ್ದೆ. ಅವರೊಬ್ಬ ಜಂಟಲ್ ಮ್ಯಾನ್, ಕೆಲವು ಜನರಿಂದ ಅವರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ, ಅವರು ಒಳ್ಳೆಯ ವ್ಯಕ್ತಿ  ಎಂದು 48 ವರ್ಷದ ಪ್ರಿಯಾ ಸಿಂಗ್‌ ಪಾಲ್‌ ಹೇಳಿದ್ದಾರೆ. 
ಸೋಮವಾರ ಸುದ್ದಿಗೋಷ್ಠಿ ನಡೆಸಿ, ತಮ್ಮ ತಂದೆಯನ್ನು ತಪ್ಪಾಗಿ ಬಿಂಬಿಸಲು ಹೊರಟಿರುವುದರಿಂದ ತಾವು ಮೌನ ಮುರಿಯಬೇಕಾಯಿತು ಎಂದು ಹೇಳಿದ್ದಾರೆ. ಈ ಸಂಬಂಧ ಕಳೆದ ತಿಂಗಳು ನಿರ್ದೇಶಕ ಮಧುರ್ ಭಂಡಾರ್ಕರ್ ಅವರಿಗೆ ಲೀಗಲ್ ನೊಟೀಸ್ ನೀಡಿರುವುದಾಗಿ ಅವರು ಹೇಳಿದ್ದಾರೆ.
1968 ರಲ್ಲಿ ಆಕೆಯನ್ನು ದತ್ತು ತೆಗೆದುಕೊಳ್ಳಲಾಯಿತು ಸಾಕು ತಂದೆ ತಾಯಿಗಳಾದ ಶೀಲಾ ಸಿಂಗ್ ಪೌಲ್ ಮತ್ತು ಬಲ್ವಂತ್ ಪೌಲ್ ಅವರು ತಿಳಿಸಿದ್ದಾರೆ.
ಆದರೆ ತಾನು ಸಂಜಯ್ ಗಾಂಧಿ ಪುತ್ರಿ ಎಂದು ಹೇಳಿಕೊಂಡಿರುವ ಮಹಿಳೆ ಬಗ್ಗೆ ಸಂಜಯ್ ಗಾಂಧಿ ಪತ್ನಿ ಮನೇಕಾ ಗಾಂಧಿ ಮತ್ತು ಅವರ ಪುತ್ರ ವರುಣ್ ಗಾಂಧಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com