ಚಿತ್ರ ನಿರ್ಮಾಣ ನನ್ನನ್ನು ಚುರುಕು ಹಾಗೂ ಸಕ್ರಿಯನನ್ನಾಗಿಸಿದೆ: ರವಿಶಂಕರ್

ತಮ್ಮ ಮಗ ಅದ್ವೈ ಶಂಕರ್ ನನ್ನು ಕನ್ನಡ ಮೂಲಕ ನಾಯಕ ನಟನನ್ನಾಗಿ ಪರಿಚಯಿಸಲು ಹೊರಟಿರುವ ನಟ ರವಿಶಂಕರ್ ಮಗನ ಸಿನಿಮಾವನ್ನು...
ರವಿಶಂಕರ್
ರವಿಶಂಕರ್
Updated on
ಬೆಂಗಳೂರು: ತಮ್ಮ ಮಗ ಅದ್ವೈ ಶಂಕರ್ ನನ್ನು ಕನ್ನಡ ಮೂಲಕ ನಾಯಕ ನಟನನ್ನಾಗಿ ಪರಿಚಯಿಸಲು ಹೊರಟಿರುವ ನಟ ರವಿಶಂಕರ್ ಮಗನ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.
ಆಗಸ್ಟ್ ನಲ್ಲಿ ಚಿತ್ರಕಥೆಯನ್ನು ಅಂತಿಮ ಗೊಳಿಸಲಿದ್ದಾರೆ. ತಮ್ಮ ಪುತ್ರ ಅದ್ವೈ ನ್ಯೂಯಾರ್ಕ್ ನ ಲೀ ಸ್ಟಾರ್ಸ್ ಬರ್ಗ್ ನಲ್ಲಿ ನಟನಾ ತರಬೇತಿ ಪಡೆಯುತ್ತಿದ್ದ ಈ ವರ್ಷದ ಅಂತ್ಯದೊಳಗೆ ಮುಗಿಯಲಿದೆ. ಹೀಗಾಗಿ ಆಕ್ಷನ್ ಕಟ್ ಹೇಳಲು ರವಿ ಸಿದ್ದರಾಗುತ್ತಿದ್ದಾರೆ.
ಮುಂದಿನ ಯುಗಾದಿಯೊಳಗೆ ಮಗನ ಸಿನಿಮಾ ರಿಲೀಸ್ ಮಾಡಲು ರವಿ ಉತ್ಸುಕರಾಗಿದ್ದಾರೆ. ಅದ್ವೈ ಬಂದ ಕೂಡಲೇ ನಾನು ಶೂಟಿಂಗ್ ಆರಂಭಿಸಲು ಸಾಧ್ಯವಿಲ್ಲ, ಆತ ಬಂದು ಇಲ್ಲಿ ಸೆಟಲ್ ಡೈನ್ ಆಗಬೇಕು, ನಂತರ  ಶೂಟಿಂಗ್ ಆರಂಭಿಸಲಿದ್ದೇನೆ ಎಂದು ಹೇಳಿದ್ದಾರೆ. 
ತಮ್ಮ ಮಗನನ್ನು ಅದರಲ್ಲೂ ಒಬ್ಬ ನಾಯಕ ನಟನನ್ನು ಪರಿಚಯಿಸುವುದು ಬಹು ದೊಡ್ಡ ಜವಾಬ್ದಾರಿಯಾಗಿದೆ. ಇದಕ್ಕಾಗಿ ನಾನು ಸಿದ್ಧಗೊಳ್ಳೂಬೇಕಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಹಲವು ನಿರ್ದೇಶಕರುಗಳು ಕಥೆಗಳನ್ನು ತಂದಿದ್ದರು, ನಾನು ಕೂಡ ಕೆಲ ಕಥೆ ಬರೆದಿದ್ದೇನೆ, ಐದು ಕಥೆಗಳು ಕನ್ಫರ್ಮ್ ಆಗಿದ್ದು, ಆಗಸ್ಟ್ ನೊಳಗೆ ಅವುಗಳಲ್ಲಿ ಒಂದು ಕಥೆಯನ್ನು ಆಯ್ಕೆ ಮಾಡಲಾಗುತ್ತದೆ.
ಪೂರ್ವ ತಯಾರಿ ಮಾಡಿಕೊಳ್ಳಲು ನನಗೆ 8 ತಿಂಗಳು ಸಮಯಾವಕಾಶವಿದೆ, ಈ ಅವದಿಯಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ಲೋಕೇಶನ್ ಮುಂತಾದವುಗಳ ಸಿದ್ಧತೆ ನಡೆಸಲಾಗುವುದು.
ತಮ್ಮ ಮಗನನ್ನು ನಾಯಕನಾಗಿ ಪರಿಚಯಿಸಿ ವೃತ್ತಿಪರನನ್ನಾಗಿಸುವಲ್ಲಿ ರವಿಶಂಕರ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನನ್ನ ಜನಪ್ರಿಯತೆಯನ್ನು ಆತ ಬಳಸಿಕೊಳ್ಳಬಾರದು, ಬದಲಿಗೆ  ಅವನ ಪ್ರತಿಭೆಯಿಂದಲೇ ಆತ ಗುರುತಿಸಿಕೊಳ್ಳಬೇಕೆಂದು ರವಿಶಂಕರ್ ಬಯಸಿದ್ದಾರೆ.
ತಮ್ಮ ಪುತ್ರ ಈಗಾಗಲೇ ಹಲವು ಕಿರುಚಿತ್ರ ನಿರ್ಮಿಸಿದ್ದಾನೆ, ಕಾಲೇಜು ನಾಟಕಗಳಲ್ಲಿ ಉತ್ತಮವಾಗಿ ಅಭಿನಯಿಸುತ್ತಿದ್ದ ಎಂದು ರವಿಶಂಕರ್ ತಿಳಿಸಿದ್ದಾರೆ.
ತಮ್ಮ ಪುತ್ರನ ಸಿನಿಮಾಗಾಗಿ ರವಿಶಂಕರ್ ಉತ್ತಮವಾಗಿ ಸಿದ್ಧತೆಗ ಕೈಗೊಂಡಿದ್ದಾರೆ. ಹಲವು ವರ್ಷಗಳ ಚಿತ್ರ ನಿರ್ಮಾಣದ ನಂತರ ನನ್ನಲ್ಲಿ ಚುರುಕುತನ ಹಾಗೂ ಸಕ್ರಿಯತೆಗಳು ಉತ್ತಮಗೊಂಡಿವೆ. ನನ್ನ ವಿಷಯಗಳ ಬಗ್ಗೆ ನಾನು ಚೆನ್ನಾಗಿ ತಿಳಿದು ಕೊಂಡಿದ್ದೇನೆ. ದುರ್ಗಿಯ ನಂತರ ಮತ್ತೊಂದು ಚಿತ್ರ ನಿರ್ದೇಶನಕ್ಕೆ ನಾನು 15 ವರ್ಷ ತೆಗೆದುಕೊಂಡಿದ್ದೇನೆ, ಇದು ನನ್ನ ಮಗನಿಗಾಗಿ ನಾನು ಮಾಡುತ್ತಿದ್ದೇನೆ ಎಂದು ರವಿಶಂಕರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com