ಸಂಜನಾ
ಸಿನಿಮಾ ಸುದ್ದಿ
ಸಿನಿಮಾಗಾಗಿ ಬೆತ್ತಲಾದ ಸಂಜನಾ!: ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್
ಗಂಡ ಹೆಂಡತಿ ಚಿತ್ರದ ಖ್ಯಾತಿಯ ನಟಿ ಸಂಜನಾ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನು ಅಲ್ಲ. ಆದರೆ....
ಬೆಂಗಳೂರು: ಗಂಡ ಹೆಂಡತಿ ಚಿತ್ರದ ಖ್ಯಾತಿಯ ನಟಿ ಸಂಜನಾ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನು ಅಲ್ಲ. ಆದರೆ ಇದೇ ಮೊದಲ ಬಾರಗಿ ಸಂಪೂರ್ಣ ಬೆತ್ತಲಾಗಿರುವ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಸಂಜನಾ ಅವರ ಬೆತ್ತಲೆ ಸೀನ್ ಸಾಕಷ್ಟು ಸದ್ದು ಮಾಡುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ದಂಡುಪಾಳ್ಯ- 2ರಲ್ಲಿ ಸಂಜನಾ ಸಂಪೂರ್ಣ ಬೆತ್ತಲಾಗಿರುವ ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದು, ಕಟ್ ಮಾಡಿದ ದೃಶ್ಯವನ್ನು ಈಗ ಲೀಕ್ ಮಾಡಲಾಗಿದೆ.
ವಿಡಿಯೋದಲ್ಲಿ ಕೈದಿಯಾಗಿದ್ದ ಸಂಜನಾಗೆ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿ (ರವಿಶಂಕರ್) ನಗ್ನ ಗೊಳಿಸಿ ಚಿತ್ರ ಹಿಂಸೆ ನೀಡಿರುವುದು ಕಂಡು ಬಂದಿದೆ.
ಒಟ್ಟಾರೆಯಾಗಿ ಚಿತ್ರಕ್ಕೆ ಇನ್ನಷ್ಟು ಪ್ರಚಾರ ನೀಡುವ ಉದ್ದೇಶದಿಂದ ದೃಶ್ಯವನ್ನು ಲೀಕ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಸಂಜನಾ, ಇಡೀ ತಂಡದ ಜೊತೆ ಬಂದು ಮಾತನಾಡುತ್ತೇನೆ. ಅಲ್ಲಿ ನಡೆದಿದ್ದೇ ಬೇರೆ ಇದೆ. ತೆರೆಗೆ ಬಂದಿರುವುದೇ ಬೇರೆ. ನಾನು ಬಹುಭಾಷಾ ನಟಿ. ಕಷ್ಟಪಟ್ಟು ಚಿತ್ರರಂಗದಲ್ಲಿ ಬೆಳೆದು ಬಂದಿದ್ದೇನೆ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಸೆನ್ಸಾರ್ ವೇಳೆ ಕಟ್ ಮಾಡಲಾಗಿರುವ ದೃಶ್ಯವಿದು ಎನ್ನಲಾಗುತ್ತಿದೆ.
ನಿನ್ನೆ ನಡೆದ ಪ್ರೆಸ್ ಮೀಟ್ ವೇಳೆಯೂ ಪೊಲಿಸ್ ಟಾರ್ಚರ್`ನ ಪ್ರಮುಖ ದೃಶ್ಯವೊಂದಕ್ಕೆ ಕತ್ತರಿ ಹಾಕಲಾಗಿದೆ ಎಂದು ನಟಿ ಸಂಜನಾ ಅಸಮಾಧಾನ ವ್ಯಕ್ತಪಡಿಸಿದ್ದನ್ನ ಇಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ