ನಿಧಿ ಅಗರ್ ವಾಲ್
ನಿಧಿ ಅಗರ್ ವಾಲ್

ಬಾಲಿವುಡ್ ನಲ್ಲಿ ಬೆಂಗಳೂರು ಹುಡುಗಿ ನಿಧಿ ಅಗರ್ ವಾಲ್ ಕಲರವ

ಸಾಮಾನ್ಯವಾಗಿ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿದ ನಟಿಯರು ಬಿ-ಟೌನ್ ನಲ್ಲಿ ಬ್ರೇಕ್ ಪಡೆದುಕೊಳ್ಳುತ್ತಾರೆ, ದೀಪಿಕಾ ಪಡುಕೋಣೆ, ಕೃತಿ ಕರಬಂಧ ಮೊಟ್ಟ ...
ಬೆಂಗಳೂರು: ಸಾಮಾನ್ಯವಾಗಿ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿದ ನಟಿಯರು ಬಿ-ಟೌನ್ ನಲ್ಲಿ ಬ್ರೇಕ್ ಪಡೆದುಕೊಳ್ಳುತ್ತಾರೆ, ದೀಪಿಕಾ ಪಡುಕೋಣೆ, ಕೃತಿ ಕರಬಂಧ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದರೂ ಅವರಿಗೆ ಬ್ರೇಕ್ ಕೊಟ್ಟಿದ್ದು ಬಾಲಿವುಡ್ ಚಿತ್ರಗಳು.
ಆದರೆ ಬೆಂಗಳೂರಿನ ಹುಡುಗಿ ಮಾಡೆಲ್ ಕಮ್ ನಟಿ ನಿಧಿ ಅಗರ್ ವಾಲ್ ಮೊಟ್ಟ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರಿಕ್ಷಿಸಿಲು ಹೊರಟಿದ್ದಾರೆ.  ಶಬ್ಬೀರ್ ಖಾನ್ ನಿರ್ದೇಶನದಲ್ಲಿ ಟೈಗರ್ ಶ್ರಾಫ್ ಜೊತೆ ನಿಧಿ ಮುನ್ನಾ ಮೈಕೆಲ್ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.
ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ನಿಧಿ, ಇದೊಂದು ಅದ್ಭುತ ಅನುಭವವಾಗಿದೆ. ಅದರ ಜೊತೆಗೆ ಇದು ನನ್ನ ಮೊದಲ ಸಿನಿಮಾವಾಗಿರುವುದರಿಂದ ಅಷ್ಟೇ ಕುತೂಹಲದಿಂದ ಎದುರು ನೋಡುತ್ತಿದ್ದೇನೆ. 
ನಾನು ಹೆಚ್ಚು ತಪ್ಪು ಮಾಡಿಲ್ಲ, ಏಕೆಂದರ ನಾನು ಕಠಿಣವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರ್ಯಾಂಪ್ ಮೇಲಿನ ನಡಿಗೆ ಅಲ್ಪ ಸಮಯದ್ದಾಗಿದೆ, ನನ್ನ ಫೋಟೋ ಶೂಟ್ ಕ್ಯಾಮೆರಾ ಮುಂದೆ ಅಭಿನಯಿಸಲು ಸಹಾಯ ಮಾಡಿತು. ನನ್ನಲ್ಲಿ ಆತ್ಮ ವಿಶ್ವಾಸ ತುಂಬಿತು. ಕ್ಯಾಮೆರಾ ಎದುರಿಸಲು ಭಯ ಪಡುವ ಸಮಸ್ಯೆ ನನಗಾಗಿಲ್ಲ ಎಂದು ಹೇಳಿದ್ದಾರೆ.
ಬಾಲಿವುಡ್ ನಲ್ಲಿ ಟೈಗರ್ ಈಗಾಗಲೇ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ,  ಅವರು ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ,. ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ನನಗೆ ಸಮಸ್ಯೆಯಾಗಿಲ್ಲ, ಅವರು ತುಂಬಾ ಒಳ್ಳೆಯ ವ್ಯಕ್ತಿತ್ವದ ನಟ, ಒಬ್ಬರು ಪ್ರತಿಭೆಯುಳ್ಳ ಕಲಾವಿದರು ಎಂದು ನಿಮಗೆ ತಿಳಿದ ನಂತರ ಅವರ ಜೊತೆ ನೀವು ಮತ್ತಷ್ಟು ಉತ್ತಮವಾಗಿ ಅಭಿನಯಿಸಬಹುದು, ನಾನು ಅದನ್ನೇ ಟೈಗರ್ ತುಂಬಾ ಪ್ರೋತ್ಸಾಹದಾಯಕ ವ್ಯಕ್ತಿ ನನಗೆ ತುಂಬಾ ಸಹಾಯ ಮಾಡಿದರು ಎಂಬುದು ನಿಧಿಯ ಮನದಾಳದ ಮಾತು.
ಮುನ್ನಾ ಮೈಕೆಲ್ ಸಿನಿಮಾ ಮೈಕೆಲ್ ಜಾಕ್ಸನ್ ಅವರಿಗೆ ಅರ್ಪಿಸಲಾಗಿದೆ, ಆದರೆ ಇದು ಸಂಗೀತಗಾರನ ಕಥೆಯಲ್ಲ, ಇದೊಂದು ಆಸಕ್ತಿದಾಯತ ತ್ರಿಕೋನ ಪ್ರೇಮಕಥೆ, ಟೈಗರ್ ನಾನು ಮತ್ತು ನವಾಜುದ್ದೀನ್ ನಡುವಿನ ಕಥೆಯಾಗಿದೆ. ಇದರಲ್ಲಿ ನಾನು ಡ್ಯಾನ್ಸರ್ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿನ ಮೂನ್ ವಾಕ್ ಸನ್ನಿವೇಶವನ್ನು ನಾನು ತುಂಬಾ ಎಂಜಾಯ್ ಮಾಡಿದ್ದೇನೆ. ನನ್ನ ಬಾಲ್ಯದಲ್ಲಿ ನಾನು 7 ವರ್ಷಗಳ ಕಾಲ ಬ್ಯಾಲೆಟ್ ಅಭ್ಯಾಸ ಮಾಡಿದ್ದೆ. ಡ್ಯಾನ್ಸ್ ಕೂಡ ಕಲಿತಿದ್ದೆ. ಅದು ಕೂಡ ನನಗೆ ಸಹಾಯ ಮಾಡಿತು.
ನನಗೆ ಯಾರು ಗಾಡ್ ಫಾದರ್ ಇಲ್ಲ, ಆದರೆ ನನ್ನ ಬಗ್ಗೆ ಆತ್ಮ ವಿಶ್ವಾಸವಿದೆ. ತುಂಬಾ ಸ್ಪರ್ಧೆಯಿದೆ. ಇಂದಿನಿಂದ ಮುಂದಿನ ಐದು ವರ್ಷಗಳು ಯಾರು ಮಾತನಾಡುತ್ತಾರೆ ಎಂಬುದನ್ನು ನೋಡಿ ಎಂದು ಆಕೆ ಹೇಳಿದ್ದಾರೆ, ಕನ್ನಡದಲ್ಲಿ ನಟಿಸಲು ನನಗೇನು ಅಭ್ಯಂತರವಿಲ್ಲ, ಆದರೆ ಒಂದೇ ಒಂದು ಷರತ್ತು, ಅದು ಬಾಹುಬಲಿ ಪ್ರಾಜೆಕ್ಟ್ ನಂತೆ ಇರಬೇಕು.

Related Stories

No stories found.

Advertisement

X
Kannada Prabha
www.kannadaprabha.com