ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ ಕೃಷ್ಣಲೀಲಾ ಸಿನಿಮಾದಲ್ಲಿ ನಟಿಸಿ ನಾಯಕಿಯಾಗಿದ್ದ ಮಯೂರಿ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ, ಅದೂ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡದ ಉದಯ ಟಿವಿಯಲ್ಲಿ ಪ್ರಸಾರವಾಗುವ ಜೋಜೋ ಲಾಲಿ ಎಂಬ ಧಾರಾವಾಹಿಯಲ್ಲಿ ಮಯೂರಿ ಅತಿಥಿಯಾಗಿ ಬರಲಿದ್ದಾರೆ. ಧಾರಾವಾಹಿಯ ಕಥೆಯಲ್ಲಿ ಮಯೂರಿ ಎಂಟ್ರಿ ಮೇಜರ್ ಟರ್ನಿಂಗ್ ಪಾಯಿಂಟ್ ಆಗಲಿದೆ. ಬಾಡಿಗೆ ತಾಯ್ತನದ ಬಗ್ಗೆ ಉತ್ತಮ ಸಂದೇಶ ಸಾರುವ ಕಥಾ ವಸ್ತುವಿದ್ದು, ಜನರಿಗೆ ಅದರ ಬಗ್ಗೆ ಅರಿವು ಮೂಡಿಸಲಿದ್ದಾರೆ.
ಕಿರುತೆರೆಯಲ್ಲಿ ಮಿಸ್ ಮಾಡಿಕೊಂಡಿದ್ದ ಮಯೂರಿಯನ್ನು ಬರುವ ಸೋಮವಾರದಿಂದ ಮತ್ತೆ ನೋಡಬಹುದಾಗಿದೆ.