ಭರವಸೆ ಮೂಡಿಸಿರುವ ದೃವ ಸರ್ಜಾ ನಟನೆಯ ಭರ್ಜರಿ ಚಿತ್ರ

ದೃವ ಸರ್ಜ ನಟನೆಯ ಮೂರನೇ ಚಿತ್ರ ಭರ್ಜರಿ ಹಲವು ಅಡೆತಡೆಗಳನ್ನು ಎದುರಿಸಿದ್ದರೂ, ಆವೇಗ ಕಳೆದುಕೊಂಡಿರಲಿಲ್ಲ. ಚೇತನ್ ಕುಮಾರ್ ನಿರ್ದೇಶನದ ಚಿತ್ರ ಈಗ ವಿತರಕರ ಕಾರಣದಿಂದ ಸುದ್ದಿಯಲ್ಲಿದೆ.
ಭರ್ಜರಿ
ಭರ್ಜರಿ
Updated on
ದೃವ ಸರ್ಜ ನಟನೆಯ ಮೂರನೇ ಚಿತ್ರ ಭರ್ಜರಿ ಹಲವು ಅಡೆತಡೆಗಳನ್ನು ಎದುರಿಸಿದ್ದರೂ, ಆವೇಗ ಕಳೆದುಕೊಂಡಿರಲಿಲ್ಲ. ಚೇತನ್ ಕುಮಾರ್ ನಿರ್ದೇಶನದ ಚಿತ್ರ ಈಗ ವಿತರಕರ ಕಾರಣದಿಂದ ಸುದ್ದಿಯಲ್ಲಿದೆ. 
ಭರ್ಜರಿ ಚಿತ್ರದ ವಿತರಣೆಯ ಹಕ್ಕು ಪಡೆದಿರುವ ವಿತರಕ ಪ್ರಸಾದ್, ಅನಾರೋಗ್ಯದ ಕಾರಣ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಭರ್ಜರಿ ಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ವಾಪಸ್ ಬಂದಿರುವ ಪ್ರಸಾದ್, ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದು, ಅದರಿಂದ ಬರುವ ಆದಾಯದಲ್ಲಿ ಕಿಡ್ನಿ ಕಸಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. 
ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಅವರು, ಕಿಡ್ನಿ ವೈಫಲ್ಯ ಉಂಟಾಗಿರುವುದರಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಖಿನ್ನತೆಯಿಂದ ಹೊರಬರಬೇಖಿದೆ. ಸಿನಿಮಾ ಇಲ್ಲದೇ ನಾನು ಒಂಟಿ ಎಂಬ ಭಾವನೆ ಕಾಡುತ್ತಿದೆ ಹಾಗೂ ಮತ್ತೊಬ್ಬರು ನೀಡುವ ಹಣದಿಂದ ಕಿಡ್ನಿ ಕಸಿ ಮಾಡಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಆದ್ದರಿಂದ ಈ ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದೇನೆ. ದೃವ ಸರ್ಜಾ ಅವರ ಭರ್ಜರಿ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿದೆ ಎಂಬ ಭರವಸೆ ಇದೆ. ನಿರ್ಮಾಪಕ ಶ್ರೀನಿವಾಸ್ ಹಣಹೂಡಿರುವ ಬಾಷಾ ಈ ಅವಕಾಶ ನೀಡುವ ಮೂಲಕ ಸಹಕರಿಸಿ, ಉತ್ತೇಜನ ನೀಡಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com