ಜೂನ್ ೫ ರಂದು ಚಿತ್ರೀಕರಣ ಪ್ರಾರಂಭವಾಗಲಿದ್ದು, ಡ್ಯಾನಿ ಅಂದೇ ಸೆಟ್ ಸೇರಲಿದ್ದಾರೆ. "ನಮಗೆ ರಾಕ್ಷಸನ ಕಳೆ ಹೊಂದಿರುವ ನಟನ ಅವಶ್ಯಕತೆ ಇತ್ತು. ಇದಕ್ಕೆ ಡ್ಯಾನಿ ಬಹಳವಾಗಿ ಹೊಂದಿಕೊಳ್ಳುತ್ತಾರೆ. ಅಲ್ಲದೆ ನಮಗೆ ತಾಜಾ ಮುಖವೊಂದನ್ನು ತೊಡಗಿಸಿಕೊಳ್ಳಬೇಕಿತ್ತು. ಅವರಿಗೆ ಕೊಟ್ಟಿರುವ ಪ್ರತಿ ಪೈಸೆಗೂ ಅವರು ಅರ್ಹ" ಎನ್ನುತ್ತಾರೆ ಈ ಆಯ್ಕೆಯ ಬಗ್ಗೆ ಭರವಸೆ ಹೊಂದಿರುವ ಬಂಡಿಯಪ್ಪ.