ಸೌಮ್ಯ ಸ್ವಭಾವದ ನಾಯಕಿಯಿಂದ ಖಳನಾಯಕಿಯ ಪಾತ್ರದತ್ತ ಮೇಘನಾ?

ಈ ಶುಕ್ರವಾರ ಮೇಘನಾ ರಾಜ್ ನಟಿಸಿರುವ ಎರಡು ಚಿತ್ರಗಳು 'ನೂರೊಂದು ನೆನಪು' ಮತ್ತು 'ಜಿಂದಾ' ಬಿಡುಗಡೆಯಾಗುತ್ತಿವೆ. ಮೊದಲನೆಯದರಲ್ಲಿ ಅವರು ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ,
ಮೇಘನಾ ರಾಜ್
ಮೇಘನಾ ರಾಜ್
ಬೆಂಗಳೂರು: ಈ ಶುಕ್ರವಾರ ಮೇಘನಾ ರಾಜ್ ನಟಿಸಿರುವ ಎರಡು ಚಿತ್ರಗಳು 'ನೂರೊಂದು ನೆನಪು' ಮತ್ತು 'ಜಿಂದಾ' ಬಿಡುಗಡೆಯಾಗುತ್ತಿವೆ. ಮೊದಲನೆಯದರಲ್ಲಿ ಅವರು ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಎರಡನೆಯದರಲ್ಲಿ ಅತಿ ವಿಭಿನ್ನ ಪಾತ್ರ ಅವರದ್ದು. 
ಸಾಮಾನ್ಯವಾಗಿ ಪಕ್ಕದ ಮನೆ ಹುಡುಗಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೇಘನಾ ಈಗ ಮೊದಲ ಬಾರಿಗೆ ಭೂಗತ ಸಿನೆಮಾವೊಂದರಲ್ಲಿ ನಟಿಸಿದ್ದಾರೆ. "ಇದು ಕಚ್ಚಾ, ನೈಜ ಮತ್ತು ಸೆನ್ಸಾರ್ ಇಲ್ಲದ ಸಿನೆಮಾ ಎಂದು ನನಗೆ ಕಂಡಿದೆ" ಎಂದು 'ಜಿಂದಾ' ಸಿನೆಮಾವನ್ನು ವಿವರಿಸುತ್ತಾರೆ ಮೇಘನಾ. 
ಈ ಸಿನೆಮಾದ ಪಾತ್ರದಲ್ಲಿ ನಿಮಗೆ ಸೆಳೆದದ್ದೇನು ಎಂಬ ಪ್ರಶ್ನೆಗೆ "ನಿರ್ದೇಶಕ ಮುಸ್ಸಂಜೆ ಮಹೇಶ್ ಕಥೆ ಹೇಳಿದಾಗ ಅದು ನನಗೆ ಬಹಳಷ್ಟು ಹಿಡಿಸಿತು. ಇದು ನಿಜ ಕಥೆಯ ಆಧಾರಿತ ಎಂದು ತಿಳಿದ ಮೇಲಂತೂ ಆಸಕ್ತಿ ಇಮ್ಮಡಿಸಿತು. ನನ್ನ ಪಾತ್ರದ ಬಗ್ಗೆ ನಾನು ಹೆಚ್ಚಿನ ವಿವರ ನೀಡಲಾರೆ ಆದರೆ ಕಥೆ ಕೇಳಿದ ಮೇಲೆ ಆ ಪಾತ್ರದ ಹುಡುಗಿ ನಿಜವಾಗಿಯೂ ಇವೆಲ್ಲ ಮಾಡಿದಳಾ ಎಂದು ಚಕಿತಳಾದೆ" ಎನ್ನುತ್ತಾರೆ ಮೇಘನಾ.
ಈ ಸಿನೆಮಾದಲ್ಲಿ ದೇವರಾಜ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದರೆ, ಮೇಘನಾ ಪೋಷಕರಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಶಿ ಕೂಡ ತಾರಾಗಣದ ಭಾಗವಾಗಿದ್ದಾರೆ.
ನಟನೆಗೆ ಬಹಳ ಸವಾಲಾಗಿದ್ದ ಪಾತ್ರವಾಗಿದ್ದರೂ, ನಿಜ ವ್ಯಕ್ತಿಗಳನ್ನು ಅಭಿನಯಿಸಬೇಕಾಗಿದ್ದರಿಂದ ಒಂದು ರೀತಿಯ ಅಪಾಯವು ಇತ್ತು ಎನ್ನುತ್ತಾರೆ ಮೇಘನಾ. "ನನ್ನ ವೃತ್ತಿ ಜೀವನದಲ್ಲಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರದಿಂದ ಸುರಕ್ಷಿತ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಆದರೆ ಒಂದೇ ರೀತಿಯ ಪಾತ್ರಗಳನ್ನು ಮಾಡುವುದರಿಂದ ಉಪಯೋಗವೇನು? 'ಜಿಂದಾ'ದಲ್ಲಿ ನನ್ನ ಪಾತ್ರ ಸವಾಲಾಗಿತ್ತು ಏಕೆಂದರೆ ಆ ಪಾತ್ರಕ್ಕೆ ನನ್ನನ್ನು ರಿಲೇಟ್ ಮಾಡಿಕೊಳ್ಳಲು ಆಗುತ್ತಲೇ ಇರಲಿಲ್ಲ. ಆದರೆ ಆ ಥ್ರಿಲ್ಲರ್ ನನ್ನನ್ನು ಸಾಕಷ್ಟು ಸೆಳೆಯಿತು. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುವ ಭರವಸೆ ಇದೆ" ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com