'ಭರ್ಜರಿ' ತಂಡ 'ಸ್ಲೊವೇನಿಯಾ' ದಲ್ಲಿ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದೆ. 'ಸ್ಲೊವೇನಿಯಾ'ದ ಸುಂದರ ತಾಣಗಳಲ್ಲಿ ಹಾಡಿನ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತಿದೆ.
ಹರ್ಷ ಕೊರಿಯೋಗ್ರಾಫ್ ನಲ್ಲಿ ರೋಮ್ಯಾಂಟಿಕ್ ಸಾಂಗ್ ನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಗಳು ಸಿಟಿ ಎಕ್ಸ್ ಪ್ರೆಸ್ ಗೆ ಸಿಕ್ಕಿವೆ.
ನಟಿ ಹರಿಪ್ರಿಯಾ ತಮ್ಮ ಟ್ವಿಟ್ಟರ್ ನಲ್ಲಿ ಸ್ಲೋವೇನಿಯಾದಲ್ಲಿ ನಡೆದ ಚಿತ್ರೀಕರಣದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಧ್ರುವ ಸರ್ಜಾ ಮತ್ತು ರಚಿತಾ ರಾಮ್ ನಟನೆಯ ಹಾಡನ್ನು ಸ್ಲೋವೆನಿಯಾದ ವಿವಿಧ ರಸ್ತೆಗಳಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಭರ್ಜರಿ ಚಿತ್ರತಂಡದ ಇಂಟ್ರುಡಕ್ಷನ್ ಸಾಂಗ್ ಮಾತ್ರ ಬಾಕಿ ಉಳಿದಿದೆ. ಈ ತಿಂಗಳ ಅಂತ್ಯದಲ್ಲಿ ಈ ಹಾಡಿನ ಚಿತ್ರೀಕರಣ ಪೂರ್ಣಗೊಳ್ಳಲಿದೆ, ನಿರ್ದೇಶಕ ಚೇತನ್ ಕುಮಾರ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ ಮೊದಲ ವಾರದಲ್ಲಿ ಚಿತ್ರದ ಫೈನಲ್ ಕಾಪಿ ಸಿದ್ಧವಾಗಲಿದೆ.