ಶ್ರೀನಿವಾಸ ರಾಜು ಕುರಿತು ಸೆನ್ಸಾರ್ ಮಂಡಳಿ ಕಳವಳ!

ಶ್ರೀನಿವಾಸ ರಾಜು ನಿರ್ದೇಶನದ 'ದಂಡುಪಾಳ್ಯ' ಸಿನೆಮಾದ ಎರಡನೇ ಭಾಗವನ್ನು ಈಗ '೨' ಎಂದು ಹೆಸರಿಸಲಾಗಿದ್ದು, ಅದಕ್ಕೆ ಸೆನ್ಸಾರ್ ಪ್ರಮಾಣಪತ್ರ ದೊರಕಿದೆ. ಇದಕ್ಕೆ 'ಎ' ಪ್ರಮಾಣ ಪತ್ರ...
'ದಂಡುಪಾಳ್ಯ' ಸಿನೆಮಾದ ಎರಡನೇ ಭಾಗದ ಪೋಸ್ಟರ್
'ದಂಡುಪಾಳ್ಯ' ಸಿನೆಮಾದ ಎರಡನೇ ಭಾಗದ ಪೋಸ್ಟರ್
ಬೆಂಗಳೂರು: ಶ್ರೀನಿವಾಸ ರಾಜು ನಿರ್ದೇಶನದ 'ದಂಡುಪಾಳ್ಯ' ಸಿನೆಮಾದ ಎರಡನೇ ಭಾಗವನ್ನು ಈಗ '೨' ಎಂದು ಹೆಸರಿಸಲಾಗಿದ್ದು, ಅದಕ್ಕೆ ಸೆನ್ಸಾರ್ ಪ್ರಮಾಣಪತ್ರ ದೊರಕಿದೆ. ಇದಕ್ಕೆ 'ಎ' ಪ್ರಮಾಣ ಪತ್ರ ನೀಡಿರುವ ಸೆನ್ಸಾರ್ ಮಂಡಳಿ ಅಧಿಕಾರಿಗಳು ನಿರ್ದೇಶಕರಿಗೆ ಒದಗಬಲ್ಲ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರಂತೆ ಕೂಡ. 
"ಭಾನುವಾರ ನನ್ನ ಸಿನೆಮಾ ನೋಡಿದ ಮಂಡಳಿ ಸದಸ್ಯರು ಭಯಭೀತರಾಗಿದ್ದರು. ಇದಕ್ಕೆ ವಿವಿಧ ಮೂಲಗಳಿಂದ ಬರುವ ಪ್ರತಿಕ್ರಿಯೆಗಳ ಬಗ್ಗೆ ಅವರು ನನಗಾಗಿ ಆತಂಕವನ್ನು ವ್ಯಕ್ತಪಡಿಸಿದರು" ಎನ್ನುತ್ತಾರೆ ನಿರ್ದೇಶಕ ರಾಜು. 
"ಇದು ಭೂಗತ ಲೋಕದ ತ್ರಿವಳಿ ಸಿನೆಮಾ ಎಂದಾಕ್ಷಣ ನನಗೆ ಹೆದರುವ ಅಗತ್ಯ ಇಲ್ಲ ಮತ್ತು ಇದಕ್ಕೆ ನಾನು ನ್ಯಾಯ ಸಲ್ಲಿಸಿದ್ದೇನೆ. ಮಹಿಳೆಯರ ವಿರುದ್ಧ ದೌರ್ಜನ್ಯದ ತೀವ್ರತಮ ದೃಶ್ಯಗಳು ಸಿನೆಮಾದಲ್ಲಿ ಇರುವುದರಿಂದ ಇದಕ್ಕೆ 'ಎ'ಗಿಂತಲೂ ನಿಯಂತ್ರಿತ ಪ್ರಮಾಣಪತ್ರ ನೀಡಬೇಕೆಂಬುದು ಅವರ ಅಭಿಮತವಾಗಿತ್ತು. ಆದರೆ ಅದಕ್ಕೆ ಅವಕಾಶ ಇಲ್ಲವಾಗಿದ್ದರಿಂದ 'ಎ' ಪ್ರಮಾಣಪತ್ರ ನೀಡಿದರು" ಎಂದು ಕೂಡ ಅವರು ತಿಳಿಸುತ್ತಾರೆ.
ಸೆನ್ಸಾರ್ ಮಂಡಳಿ ಸೂಚನೆ ಮೇರೆಗೆ ಕೆಲವು ಕಡೆ ಕತ್ತರಿ ಹಾಕಲು ಮುಂದಾಗಿರುವ ನಿರ್ದೇಶಕ ಇದು ನಮ್ಮ ನಿರೀಕ್ಷೆಗಿಂತಲೂ ಕಡಿಮೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ. "ಅವರು ೧೦ ಕ್ಕಿಂತಲೂ ಕಡಿಮೆ ಜಾಗಗಳಲ್ಲಿ ಕತ್ತರಿ ಹಾಕಲು ಸೂಚಿಸಿದ್ದಾರೆ. ಇದರ ಬಗ್ಗೆ ನಾವು ವಾದ ಕೂಡ ಮಾಡಿದೆವು ಮತ್ತು ಇದು ಒಂದು ಘಂಟೆಯ ಕಾಲ ಚರ್ಚೆ ನಡೆಯಿತು" ಎನ್ನುತ್ತಾರೆ ನಿರ್ದೇಶಕ. 
ಸಿನೆಮಾ ಜುಲೈ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನುವ ರಾಜು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದಾಗಿ ತಿಳಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com