ಹೈದರಾಬಾದ್: ಟಾಲಿವುಡ್ ನ ನಟ ಮಂಚು ಮನೋಜ್ ನಟನೆಗೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ
ಟ್ವಿಟರ್ ನಲ್ಲಿ ಈ ಬಗ್ಗೆ ತಿಳಿಸಿರುವ ಮಂಚು ಮನೋಜ್, "ಒಕ್ಕಡು ಮಿಗಿಲಾಡು" ಹಾಗೂ ನನ್ನ ಮುಂದಿನ ಸಿನಿಮಾ ನಟನಾಗಿ ನನ್ನ ಕೊನೆಯ ಸಿನಿಮಾಗಳಾಗಲಿವೆ, ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ನಟನೆಗೆ ಗುಡ್ ಬೈ ಹೇಳಲು ನಿರ್ಧರಿಸಲು ಕಾರಣ ಏನೆಂದು ಇನ್ನಷ್ಟೇ ತಿಳಿಯಬೇಕಿದೆ.
ದೊಂಗ ದೊಂಗಾಡಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಮನೋಜ್, ಪ್ರಯಾಣಂ, ಬಿಂದಾಸ್, ಪೋಟುಗಾಡು ಚಿತ್ರಗಳಲ್ಲಿ ನಟಿಸಿದ್ದಾರೆ. ಗುಂಟೂರೋಡು ಇತ್ತೀಚೆಗಷ್ಟೇ ಬಿಡುಗಡೆಯಾದ ಅವರ ಸಿನಿಮಾ ಆಗಿದೆ. ಮನೋಜ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಒಕ್ಕಡು ಮಿಗಿಲಾಡು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.