ಚಿತ್ರರಂಗ ನನ್ನನ್ನು ಒಂದು ಆಯ್ಕೆ ಎಂದು ಪರಿಗಣಿಸಲು ಬಿಡುವುದಿಲ್ಲ: ಪ್ರದೀಪ್

ಟೈಗರ್ ಸಿನಿಮಾದ ಪ್ರದೀಪ್ ಹಾದಿ ಸುಲಭವಾಗಿರಲಿಲ್ಲ. ಈ ಸಿನಿಮಗಾಗಿ ಮೂರು ವರ್ಷಗಳು ಕಾಯಬೇಕಾಗಿತ್ತು. ಈ ವೇಳೆ ಪ್ರದೀಪ್ ಬೇರೆ ಯಾವುದೇ ಪ್ರಾಜೆಕ್ಟ್ ..
ಪ್ರದೀಪ್
ಪ್ರದೀಪ್
ಬೆಂಗಳೂರು: ಕೆ. ಶಿವರಾಮ ಅವರ ಅಳಿಯ ಪ್ರದೀಪ್ ನಟಿಸಿರುವ ಟೈಗರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ವೇಳೆ ಪ್ರದೀಪ್ ತಮ್ಮ ಸಿನಿಮಾ ಜರ್ನಿ ಕುರಿತು ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಟೈಗರ್ ಸಿನಿಮಾದ ಪ್ರದೀಪ್ ಹಾದಿ ಸುಲಭವಾಗಿರಲಿಲ್ಲ. ಈ ಸಿನಿಮಗಾಗಿ ಮೂರು ವರ್ಷಗಳು ಕಾಯಬೇಕಾಗಿತ್ತು. ಈ ವೇಳೆ ಪ್ರದೀಪ್ ಬೇರೆ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಳ್ಳಲಿಲ್ಲ.
ಸಿನಿಮಾದ ಕ್ರಿಯೆಟಿವಿಟಿ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿತ್ತು. ಟೈಗರ್ ಗಾಗಿ ನಾನು ನನ್ನ ವೃತ್ತಿ ಮತ್ತು ನನ್ನ ವಯಸ್ಸನ್ನು ಮೀಸಲಿರಿಸಿದೆ.
ಆದರೆ ಒಂದು ವೇಳೆ ನಾನು ಈ ರಿಸ್ಕ್ ತೆಗೆದುಕೊಳ್ಳದಿದ್ದರೇ ನನ್ನ ಕೆರಿಯರ್ ಎಲ್ಲಿಗೂ ಹೋಗುತ್ತಿರಲಿಲ್ಲ. ಬದಲಾಗಿ ಮತ್ತೆರಡು ಪ್ರಾಜೆಕ್ಟ್ ಗಳು ನನ್ನ ಕೈ ನಲ್ಲಿ ಇರುತ್ತಿರಲಿಲ್ಲ.
ತಮ್ಮ ವೃತ್ತಿ ಜೀವನದ ಬಗ್ಗೆ ಸ್ಪಷ್ಟವಾಗಿತ್ತು, ಚಿತ್ರರಂಗದಲ್ಲಿ ನಾನು ಒಂದು ಆಯ್ಕೆ ಎಂದು ಪರಿಗಣಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ನಟನೆ ಜೀವನವಾಗಿದೆ, ಆದರೆ ನಾಳಿನ ಬಗ್ಗೆ ಯೋಚನೆ ಮಾಡಿಕೊಂಡು ಇಂದಿನ ದಿನವನ್ನು ನಾನು ಹಾಳು ಮಾಡಿಕೊಳ್ಳುವವನಲ್ಲ, ಇದೊಂದು ಯೋಜಿತ ಸಿನಿಮಾ ಎಂದು ಪ್ರದೀಪ್ ಹೇಳಿದ್ದಾರೆ.
ಈ ಸಿನಿಮಾದ ಕಥೆಯನ್ನು  ನನಗಾಗಿಯೇ ತರುಣ್ ಸುಧೀರ್ ಬರೆದಿದ್ದಾರೆ, ಅವರ ಸಹೋದರ ನಂದ ಕಿಶೋರ್  ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ನನ್ನ ವ್ಯಕ್ತಿತ್ವದ ಸಾಮರ್ಥ್ಯ ಹಾಗೂ ಬಲ ಹೀನತೆಗಳನ್ನು ಅರಿತಿರಿುವ ನಿರ್ದೇಶಕರು ಈ ಕಥೆಯನ್ನು ಸೃಷ್ಟಿಸಿದ್ದಾರೆ. 
ಚಿತ್ರಕಥೆ ನನಗಾಗಿ ಬರೆದಿದ್ದರಿಂದ ನನ್ನ ಉತ್ಸಾಹ ಇಮ್ಮಡಿಗೊಂಡಿತು. ಹೀಗಾಗಿ ನಾನು ತೆರೆಯ ಮೇಲೆ ಅತ್ಯುತ್ತಮವಾಗಿ ಅಭಿನಯಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. 
ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ರವಿವರ್ಮ, ಗಣೇಶ್, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಹರ್ಷ, ಮುರಳಿ, ಧನ್‍ಕುಮಾರ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. 
ಪ್ರದೀಪ್, ಮಧುರಿಮಾ, ಕೆ.ಶಿವರಾಂ, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ರಂಗಾಯಣ ರಘು  ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com