ಆಕಾಂಕ್ಷಾ
ಆಕಾಂಕ್ಷಾ

'ಕರ್ವ' ನಿರ್ದೇಶಕ ನವನೀತ್ ಮುಂದಿನ ಚಿತ್ರದಲ್ಲಿ ಆಕಾಂಕ್ಷಾ ಕುರುಡಿ!

ರ್ವ ಸಿನಿಮಾ ಮೂಲಕ ಮನೆ ಮಾತಾದ ನಿರ್ದೇಶಕ ನವನೀತ್ ಮೂರನೇ ಪ್ರಾಜೆಕ್ಟ್ ಆಗಸ್ಟ್ ನಲ್ಲಿ ಆರಂಭವಾಗಲಿದ್ದು, ಈ ಸಿನಿಮಾದಲ್ಲಿ ಆಕಾಂಕ್ಷಾ ...
Published on
ಬೆಂಗಳೂರು: ಕರ್ವ ಸಿನಿಮಾ ಮೂಲಕ ಮನೆ ಮಾತಾದ ನಿರ್ದೇಶಕ ನವನೀತ್  ಮೂರನೇ ಪ್ರಾಜೆಕ್ಟ್  ಆಗಸ್ಟ್ ನಲ್ಲಿ ಆರಂಭವಾಗಲಿದ್ದು, ಈ ಸಿನಿಮಾದಲ್ಲಿ ಆಕಾಂಕ್ಷಾ ಕುರುಡಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಸದ್ಯ ಬೂಕಾಸುರ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನವನೀತ್ ಮೂರನೇ ಚಿತ್ರವನ್ನು ಅವರ ಸ್ನೇಹಿತರೇ ನಿರ್ಮಿಸುತ್ತಿದ್ದು, ಇದೊಂದು ಮಹಿಳಾ ಪ್ರಧಾನ ಹಾರರ್-ಥ್ರಿಲ್ಲರ್ ಸಿನಿಮಾವಾಗಿದೆ. 
ಆಕಾಂಕ್ಷಾ ಈ ಮೊದಲು ದುನಿಯಾ ವಿಜಯ್ ಜೊತೆ ಆರ್ ಎಕ್ಸ್ ಸೂರಿ ಸಿನಿಮಾದಲ್ಲಿ ನಟಿಸಿದ್ದರು. ನಾಯಕನಿಲ್ಲದೇ ಆಕಾಂಕ್ಷಾ ನಟಿಸಲಿದ್ದಾರೆ. ಸಿನಿಮಾದಲ್ಲಿ ಆಕೆಯದ್ದು ಕುರುಡಿ ಪಾತ್ರ, ಇಡಿ ಸಿನಿಮಾ ಊಟಿಯಲ್ಲಿ ಶೂಟಿಂಗ್ ನಡೆಯಲಿದ್ದು ಪೋಷಕ ಪಾತ್ರಕ್ಕಾಗಿ ಆಯ್ಕೆ ನಡೆಯುತ್ತಿದೆ ಎಂದು ನವನೀತ್ ತಿಳಿಸಿದ್ದಾರೆ.
ಬೂಕಾಸುರ ಸಿನಿಮಾದ ಕೆಲಸಗಳು ಮುಗಿದಿದ್ದು, ಈ ವಾರಾಂತ್ಯದಲ್ಲಿ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ, ಸಿನಿಮಾ ವನ್ನು ಉಮಾಪತಿ ನಿರ್ಮಿಸುತ್ತಿದ್ದು, ಜಾಕ್ ಮಂಜು ಹಂಚಿಕೆ ಮಾಡಲಿದ್ದಾರೆ. ಆರ್ ಜೆ ರೋಹಿತ್ ಕೂಡ ನಟಿಸಿದ್ದಾರೆ.  

X

Advertisement

X
Kannada Prabha
www.kannadaprabha.com