ಟೆಕ್ಕಿ, ಗಾಯಕ, ಖಳ ನಾಯಕ ಈಗ ನಾಯಕನಟ; ವಸಿಷ್ಠ ಪಯಣ

ವಸಿಷ್ಠ ಸಿಂಹ ಗಾಯಕರಾಗುವ ತಮ್ಮ ಕನಸನ್ನು ಪೂರೈಸಿಕೊಂಡಿದ್ದಾರೆ ಮತ್ತು ಈಗ 'ದಯವಿಟ್ಟು ಗಮನಿಸಿ' ಸಿನೆಮಾದ ನಾಯಕನಟರಲ್ಲಿ ಒಬ್ಬರು ಕೂಡ. ಖಳನಾಯಕನಾಗಿ ಚಿತ್ರರಂಗ
ವಸಿಷ್ಠ ಸಿಂಹ
ವಸಿಷ್ಠ ಸಿಂಹ
ಬೆಂಗಳೂರು: ವಸಿಷ್ಠ ಸಿಂಹ ಗಾಯಕರಾಗುವ ತಮ್ಮ ಕನಸನ್ನು ಪೂರೈಸಿಕೊಂಡಿದ್ದಾರೆ ಮತ್ತು ಈಗ 'ದಯವಿಟ್ಟು ಗಮನಿಸಿ' ಸಿನೆಮಾದ ನಾಯಕನಟರಲ್ಲಿ ಒಬ್ಬರು ಕೂಡ. ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ವಸಿಷ್ಠ ಅವರಿಗೆ ಅವಕಾಶಗಳ ಮಹಾಪೂರವೇ ಹರಿದುಬಂದಿತ್ತು. 
ಅಸೆಂಚರ್ ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ವಸಿಷ್ಠ ಗಾಯಕನಾಗುವ ಕನಸುಕಂಡವರು. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ಖಳನಾಯಕನಾಗಿ ಚಿತ್ರರಂಗದ ಗಮನ ಸೆಳೆದಿದ್ದರು. ಅದಕ್ಕೂ ಮುಂಚಿತವಾಗಿ ಹಲವು ಸಿನೆಮಾದಲ್ಲಿ ನಟಿಸಿದ್ದರು ಕೂಡ. ನಂತರ ಹಲವು ಖಳನಾಯಕ ಪಾತ್ರಗಳಲ್ಲಿ ನಟಿಸಿದ ಮೇಲೆ ಈಗ ರೋಹಿತ್ ಪದಕಿ ಅವರ ಚೊಚ್ಚಲ ಚಿತ್ರ 'ದಯವಿಟ್ಟು ಗಮನಿಸಿ'ಯಲ್ಲಿ ಒಬ್ಬ ನಾಯಕನಟ. ಹಲವು ನಾಯಕನಟರ ಈ ಸಿನೆಮಾ ಕಥೆ ನಾಲ್ಕು ಹಳಿಗಳಲ್ಲಿ ಚಲಿಸುತ್ತದಂತೆ. 
ಈ ಸಿನೆಮಾದಲ್ಲಿ ವಸಿಷ್ಠ ತಮ್ಮ ಹಾಡುಗಾರಿಕೆಯ ಕೌಶಲ್ಯವನ್ನು ಕೂಡ ಪ್ರದರ್ಶಿಸಿದ್ದಾರಂತೆ. ಈ ಹಿಂದೆ ಅವರು 'ಕಿರಿಕ್ ಪಾರ್ಟಿ'ಯಲ್ಲಿ ಕೂಡ ಹಾಡೊಂದನ್ನು ಹಾಡಿದ್ದರು. "ನನಗೆ ನಟನಾಗುವ ಬಯಕೆ ಇರಲಿಲ್ಲ" ಎನ್ನುವ ವಸಿಷ್ಠ "ನನಗೆ ಗಾಯಕನಾಗುವ ಕನಸಿತ್ತು ಮತ್ತು ಅದಕ್ಕಾಗಿಯೇ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದು" ಎನ್ನುತ್ತಾರೆ. 
೨೦೧೧ ರಲ್ಲಿ ಮೊದಲ ಬಾರಿಗೆ ಕ್ಯಾಮರಾ ಮುಂದೆ ನಟಿಸಿದ್ದ ನಟನಿಗೆ 'ರಾಜ ಹುಲಿ' ಸಿನೆಮಾದಲ್ಲಿ ಒಳ್ಳೆಯ ಬ್ರೇಕ್ ಸಿಕ್ಕಿತು. "ಗುರು ದೇಶಪಾಂಡೆ ನನ್ನನ್ನು ಖಳನಾಯಕನಾಗಿಸುವ ರಿಸ್ಕ್ ತೆಗೆದುಕೊಂಡರು. ನನ್ನ ಆಂಗಿಕ ಅಭಿನಯಕ್ಕೆ ಒತ್ತು ನೀಡಿದೆ ಮತ್ತು ಪ್ರೇಕ್ಷಕರು ಅದನ್ನು ಮೆಚ್ಚಿದರು. ಆದರೆ ನಾನು ನನ್ನ ಪ್ರತಿ ಪಾತ್ರವನ್ನು ವಿಭಿನ್ನವಾಗಿ ಮಾಡಲು ಪ್ರಯತ್ನಿಸಿದ್ದೇನೆ" ಎನ್ನುತ್ತಾರೆ. 
ಇನ್ನು ಹಲವು ಸಿನೆಮಾಗಳು ಚರ್ಚೆಯಲ್ಲಿದ್ದು, ಶೀಘ್ರದಲ್ಲಿ ಕೆಲವು ಪ್ರಾರಂಭಾವಾಗುವುದಾಗಿ ತಿಳಿಸುತ್ತಾರೆ ವಸಿಷ್ಠ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com