ಬ್ರಿಟಿಷ್ ಕಾಲದ ಐತಿಹಾಸಿಕ ಸಿನೆಮಾ ಮಾಡಲು ಸಜ್ಜಾದ ಪಿಸಿ ಶೇಖರ್ ಮತ್ತು ಚೇತನ್

'ರಾಗ' ಸಿನೆಮಾ ನಂತರ ಪಿಸಿ ಶೇಖರ್ ಈಗ ನೂತನ ಸಿನೆಮಾವೊಂದಕ್ಕೆ ಅಣಿಯಾಗುತ್ತಿದ್ದಾರೆ. ಇದರ ಬಗ್ಗೆ ವಿವರಗಳನ್ನು ಇನ್ನು ಬಿಟ್ಟುಕೊಟ್ಟಿಲ್ಲವಾದರೂ, ಬ್ರಿಟಿಶ್ ಕಾಲದ ಐತಿಹಾಸಿಕ ಕಥೆ ಹೊಂದಿರಲಿದೆ
ಪಿಸಿ ಶೇಖರ್-ಚೇತನ್
ಪಿಸಿ ಶೇಖರ್-ಚೇತನ್
Updated on
ಬೆಂಗಳೂರು: 'ರಾಗ' ಸಿನೆಮಾ ನಂತರ ಪಿಸಿ ಶೇಖರ್ ಈಗ ನೂತನ ಸಿನೆಮಾವೊಂದಕ್ಕೆ ಅಣಿಯಾಗುತ್ತಿದ್ದಾರೆ. ಇದರ ಬಗ್ಗೆ ವಿವರಗಳನ್ನು ಇನ್ನು ಬಿಟ್ಟುಕೊಟ್ಟಿಲ್ಲವಾದರೂ, ಬ್ರಿಟಿಶ್ ಕಾಲದ ಐತಿಹಾಸಿಕ ಕಥೆ ಹೊಂದಿರಲಿದೆ ಎನ್ನುತ್ತವೆ ಮೂಲಗಳು. 
ಇದಕ್ಕಾಗಿ ನಿರ್ದೇಶಕ ಶೇಖರ್ ಸದ್ಯಕ್ಕೆ ಸ್ಕ್ರಿಪ್ಟ್ ರಚನೆಯಲ್ಲಿ ನಿರತರಾಗಿದ್ದಾರೆ. ಇದು ದೊಡ್ಡ ಬಜೆಟ್ ಸಿನೆಮಾ ಆಗಲಿದೆ ಎನ್ನಲಾಗಿದ್ದು, ಚಿತ್ರೀಕರಣಕ್ಕೂ ಮುಂಚಿತವಾಗಿ ನಟರು, ತಂತ್ರಜ್ಞರು ಮತ್ತು ನಿರ್ಮಾಪಕರ ಘೋಷಣೆ ಆಗಲಿದೆಯಂತೆ. ಸಿನೆಮಾ ಸೆಪ್ಟೆಂಬರ್ ನಿಂದ ಚಿತ್ರೀಕರಣ ಪ್ರಾರಂಭಿಸಲಿದೆ ಎನ್ನುತ್ತವೆ ಮೂಲಗಳು. 
ಈ ಐತಿಹಾಸಿಕ ಸಿನೆಮಾಗೆ ಚೇತನ್ ಅವರನ್ನು ನಾಯಕನಟನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. 'ಆ ದಿನಗಳು', 'ಬಿರುಗಾಳಿ', 'ಮೈನಾ' ಸಿನೆಮಾಗಳಲ್ಲಿ ನಟಿಸಿದ್ದ ಚೇತನ್ ಅವರು ಇತ್ತೀಚಿಗೆ ಬಿಡುಗಡೆಯಾದ 'ನೂರೊಂದು ನೆನಪು' ಸಿನೆಮಾದ ನಾಯಕನಟ ಕೂಡ!
ಈಗ ಮಹೇಶ್ ಬಾಬು ನಿರ್ದೇಶನದ 'ಅತಿರಥ' ಸಿನೆಮಾ ಕೂಡ ಚೇತನ್ ಮುಗಿಸಿದ್ದು, ಅದರ ಸಂಕಲನ ಕಾರ್ಯ ಭರದಿಂದ ಸಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com