ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಿದ ಸಲೀಮ್ ಖಾನ್
ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಎನ್ ಡಿ ಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರ ಆಯ್ಕೆಯನ್ನು ಖ್ಯಾತ ಚಿತ್ರಕಥೆಗಾರ ಸಲೀಮ್ ಖಾನ್ ಮಂಗಳವಾರ ಬೆಂಬಲಿಸಿದ್ದಾರೆ. ಅವರ ಬಗ್ಗೆ ಜನಕ್ಕೆ ಹೆಚ್ಚು ಗೊತ್ತಿಲ್ಲ
ಮುಂಬೈ: ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಎನ್ ಡಿ ಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರ ಆಯ್ಕೆಯನ್ನು ಖ್ಯಾತ ಚಿತ್ರಕಥೆಗಾರ ಸಲೀಮ್ ಖಾನ್ ಮಂಗಳವಾರ ಬೆಂಬಲಿಸಿದ್ದಾರೆ. ಅವರ ಬಗ್ಗೆ ಜನಕ್ಕೆ ಹೆಚ್ಚು ಗೊತ್ತಿಲ್ಲ ಏಕೆಂದರೆ "ಅವರು ವಿವಾದಗಳಿಂದ ದೂರ ಉಳಿದಿದ್ದರು" ಎಂದು ಕೂಡ ಅವರು ಹೇಳಿದ್ದಾರೆ.
ಬಿಹಾರದ ರಾಜ್ಯಪಾಲರಾಗಿದ್ದ ಕೋವಿಂದ್ ಅವರನ್ನು ಎನ್ ಡಿ ಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ಎಂದು ಸೋಮವಾರ ಘೋಷಿಸಲಾಗಿತ್ತು.
"ರಾಮ್ ನಾಥ್ ಕೋವಿಂದ್? ಅವರ ಹೆಸರು ಎಂದು ಕೇಳಿಲ್ಲವೇ? ಸಾಮಾನ್ಯ ಜ್ಞಾನ ಕಡಿಮೆ. ಈಗ ಅವರನ್ನು ರಾಷ್ಟ್ರಪತಿ ಹುದ್ದೆ ಚುನಾವಣೆಗೆ ನೇಮಿಸಿರುವುದರಿಂದ ಎಲ್ಲರಿಗು ಗೊತ್ತಾಗಿದೆ. ನೀವು ಅವರ ಹೆಸರನ್ನು ಕೇಳದೆ ಇರುವುದಕ್ಕೆ ಕಾರಣ ಅವರು ವಿವಾದಗಳಿಂದ ದೂರವುಳಿದಿದ್ದು ಇರಬಹುದು" ಎಂದು ಸಲೀಮ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.
"ಇದು ರಾಜಕೀಯ ಪ್ರೇರಿತ ಎಂದೆನಿಸುತ್ತದೆಯೇ? ಸರಿ ಬೇರೆ ಇನ್ನೇನನ್ನು ನಿರೀಕ್ಷಿಸಿದ್ದಿರಿ? ಇದು ಎರಡು ಗೆಳೆತನದ ತಂಡಗಳ ನಡುವೆ ಆಡುವ ಕ್ರಿಕೆಟ್ ಪಂದ್ಯವಲ್ಲ" ಎಂದು ಕೂಡ ಅವರು ಬರೆದಿದ್ದಾರೆ.
ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂದೆ ನಂತರ ಕೋವಿಂದ್ ಅವರಿಗೆ ಅಭಿನಂದನೆ ತಿಳಿಸಿ, ಆ ಆಯ್ಕೆಯನ್ನು ಟೀಕಿಸುತ್ತಿರುವವರನ್ನು ಖಂಡಿಸಿದ್ದಾರೆ.
"ಕೋವಿಂದ್ ಅವರಿಗೆ ಮತ್ತು ಈ ಆಯ್ಕೆಯನ್ನು ಮಾಡಿದ ಎಲ್ಲರಿಗು ಅಭಿನಂದನೆಗಳು. ಅವರು ಭಾರತದ ಅತ್ಯುತ್ತಮ ರಾಷ್ಟ್ರಪತಿಗಳಲ್ಲಿ ಒಬ್ಬರಾಗುತ್ತಾರೆ ಎಂದು ನಂಬಿದ್ದೇನೆ. ನ್ಯಾಯ, ಪ್ರಾಮಾಣಿಕತೆ ಇತ್ತೀಚಿಗೆ ವಿರಳವಾಗಿವೆ" ಎಂದು ಕೂಡ ಅವರು ಹೇಳಿದ್ದಾರೆ.
ಅಗತ್ಯ ಬಿದ್ದರೆ ಜುಲೈ ೧೭ ರಂದು ರಾಷ್ಟ್ರಪತಿ ಚುನಾವಣಾ ನಡೆಯಲಿದೆ.