ನಟ ಶ್ರೀಮುರಳಿ
ನಟ ಶ್ರೀಮುರಳಿ

ಮುಂದಿನ ಚಿತ್ರದಲ್ಲಿ ಶ್ರೀಮುರಳಿ ನೂರರಲ್ಲಿ ಒಬ್ಬ!

ಈ ವಾರ ಕುಟುಂಬದೊಂದಿಗೆ ಪ್ರವಾಸ ಮತ್ತು ವಿರಾಮಕ್ಕೆ ಅಣಿಯಾಗುತ್ತಿರುವ ನಟ ಶ್ರೀಮುರಳಿ, ಜುಲೈ ಮೊದಲ ವಾರದಿಂದ 'ಮಫ್ತಿ' ಸಿನೆಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ
Published on
ಬೆಂಗಳೂರು: ಈ ವಾರ ಕುಟುಂಬದೊಂದಿಗೆ ಪ್ರವಾಸ ಮತ್ತು ವಿರಾಮಕ್ಕೆ ಅಣಿಯಾಗುತ್ತಿರುವ ನಟ ಶ್ರೀಮುರಳಿ, ಜುಲೈ ಮೊದಲ ವಾರದಿಂದ 'ಮಫ್ತಿ' ಸಿನೆಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ನಾರ್ಥನ್ ನಿರ್ದೇಶನದ ಈ ಸಿನೆಮಾದಲ್ಲಿ ಶಾನ್ವಿ ಶ್ರೀವಾಸ್ತವ ನಾಯಕ ನಟಿ. ಈ ಮಧ್ಯೆ ನಟ ತಮ್ಮ ಮುಂದಿನ ಸಿನೆಮಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದರಲ್ಲಿ ನೂರು ಪಾತ್ರಗಳು ಇರಲಿವೆಯಂತೆ. 
ನಿರ್ಮಾಪಕ ಜಯಣ್ಣ ಮತ್ತು ಭೋಗೇಂದ್ರ ಅವರೊಂದಿಗೆ ಇನ್ನು ಹೆಸರಿಡದ ಈ ಚಿತ್ರದಲ್ಲಿ ನಟ ತೊಡಗಿಸಿಕೊಳ್ಳಲಿದ್ದಾರೆ. 'ಮಫ್ತಿ' ಚಿತ್ರೀಕರಣದ ನಂತರ ಈ ಸಿನೆಮಾದ ನಿರ್ದೇಶಕರನ್ನು ಘೋಷಿಸಲಾಗುವುದಂತೆ. 
ಈ ಸಿನೆಮಾದಲ್ಲಿ ೧೦೦ ಪಾತ್ರಗಳು ಇರಲಿದ್ದು, ಅವೆಲ್ಲವೂ ಪ್ರಮುಖ ಎನ್ನುತ್ತಾರೆ ನಟ. "ಅತಿ ದೊಡ್ಡ ತಾರಾಗಣ ಇರುವ ಸಿನೆಮಾದಲ್ಲಿ, ಕೆಲವು ಪಾತ್ರಗಳಷ್ಟೇ ನಿರೂಪಣೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತವೆ. ೧೦೦ ಪಾತ್ರಗಳನ್ನೂ ಬೆಸೆಯುವುದು ಸವಾಲಿನ ಕೆಲಸ ಮತ್ತು ತಂಡ ಅದರತ್ತ ಕೆಲಸ ಮಾಡುತ್ತಿದೆ" ಎನ್ನುತ್ತಾರೆ ಶ್ರೀಮುರಳಿ. 
ಈ ಸವಾಲನ್ನು ಎರಡು ವರೆ ಘಂಟೆಯಲ್ಲಿ ಸಾಧಿಸಬೇಕು ಎನ್ನುವ ಅವರು "ಅವರೆಲ್ಲರ ಜೀವನಕ್ಕೆ ಸಂಬಂಧವಿರುತ್ತದೆ. ಈ ಕಥೆ ಪ್ರೇಕ್ಷಕನ ಮನೆಯಲ್ಲೇ ನಡೆಯುವಂತೆ ಭಾಸವಾಗಬೇಕು, ಹಾಗೆ ಯೋಜಿಸಲಾಗುತ್ತಿದೆ" ಎನ್ನುತ್ತಾರೆ ಮುರಳಿ. 
ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಈ ನೂತನ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com