ನನ್ನನ್ನು ಪ್ರೀತಿಸುವ ಪ್ರೇಕ್ಷಕರಿಂದ ನನ್ನನ್ನು ದೂರ ಮಾಡುವುದು ಇವರ ಪ್ರಮುಖ ಉದ್ದೇಶವಾಗಿದೆ. ನನ್ನ ಮುಂದಿನ ಹೊಸ ಚಿತ್ರಗಳಾದ ರಾಮ್ ಲೀಲಾ ಮತ್ತು ಇತರ ಸಿನಿಮಾಗಳನ್ನು ವಿಫಲಗೊಳಿಸಲು ಪ್ರಯತ್ನಿಸಲಾಗುತ್ತಿದೆ. ನನ್ನ ರಕ್ತಕ್ಕಾಗಿ ಹಾ ತೊರೆಯುವವರೊಂದಿಗೆ, ಮಾಧ್ಯಮಗಳೊಂದಿಗೆ, ಸಾರ್ವಜನಿಕರೊಂದಿಗೆ, ನಾನು ಯಾವ ಕೇಸಿನಲ್ಲಿಯೂ ಶಾಮೀಲಾಗಿಲ್ಲ ಎಂದು ಹೇಳಲು ಇಚ್ಛಿಸುತ್ತೇನೆ.ಬ್ರೈನ್ ಮ್ಯಾಪಿಂಗ್ , ಸುಳ್ಳು ಪತ್ತೆ ಪರೀಕ್ಷೆ ಯಾವುದೇ ಇರಲಿ, ಎಲ್ಲದಕ್ಕೂ ನಾನು ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ.