ಮೊಟ್ಟೆ ತಲೆ ಜೊತೆಗೊಂದು ಸೆಲ್ಫಿ ಪ್ರಚಾರಕ್ಕೆ ಮೊರೆಹೋದ ಪವನ್ ಕುಮಾರ್

ನಿರ್ದೇಶಕ ಪವನ್ ಕುಮಾರ್ ಅರ್ಪಿಸುತ್ತಿರುವ 'ಒಂದು ಮೊಟ್ಟೆಯ ಕಥೆ' ಸಿನೆಮಾದ ಪ್ರಚಾರಕ್ಕೆ ಹಲವು ತಂತ್ರಗಳನ್ನು ರೂಪಿಸಿದ್ದಾರೆ. ಅವುಗಳಲ್ಲಿ ಒಂದು ಮೊಟ್ಟೆ ತಲೆಯ ಜೊತೆಗೊಂದು ಸೆಲ್ಫಿ.
ರಾಜ್ ಬಿ ಶೆಟ್ಟಿ-ಪವನ್ ಕುಮಾರ್
ರಾಜ್ ಬಿ ಶೆಟ್ಟಿ-ಪವನ್ ಕುಮಾರ್
ಬೆಂಗಳೂರು: ನಿರ್ದೇಶಕ ಪವನ್ ಕುಮಾರ್ ಅರ್ಪಿಸುತ್ತಿರುವ 'ಒಂದು ಮೊಟ್ಟೆಯ ಕಥೆ' ಸಿನೆಮಾದ ಪ್ರಚಾರಕ್ಕೆ ಹಲವು ತಂತ್ರಗಳನ್ನು ರೂಪಿಸಿದ್ದಾರೆ. ಅವುಗಳಲ್ಲಿ ಒಂದು ಮೊಟ್ಟೆ ತಲೆಯ ಜೊತೆಗೊಂದು ಸೆಲ್ಫಿ. ಯಾವುದಾದರೂ ಮಾಲ್ ನೊಳಗೆ ಹೊಕ್ಕಿ, ಅಲ್ಲಿರುವ ಕಟ್ ಔಟ್ ಗೆ ನಿಮ್ಮ ಮೊಟ್ಟೆ ತಲೆ ಸಿಕ್ಕಿಸಿ ಸೆಲ್ಫಿ ತೆಗೆದು ಕಳುಹಿಸಬೇಕಂತೆ! 
'ಒಂದು ಮೊಟ್ಟೆಯ ಕಥೆ'ಯ ನಿರ್ಮಾಪಕರೂ ಆಗಿರುವ ಪವನ್, ಈ ಅಭಿಯಾನ ಕೇವಲ ಪ್ರಚಾರ ಮಾತ್ರವಷ್ಟೇ ಅಲ್ಲ ಬದಲಾಗಿ ಬೋಳು ತಲೆಯ ಜನಗಳ ಜೊತೆಗೆ ನಾವಿದ್ದೇವೆ ಎಂದು ತೋರಿಸುವುದಕ್ಕೂ ಎನ್ನುತ್ತಾರೆ. "ಈ ಪ್ರಕ್ರಿಯೆಯಲ್ಲಿ ನನಗೆ ತಿಳಿದದ್ದೇನೆಂದರೆ ಬೋಳು ತಲೆಯವರನ್ನು ನಮ್ಮ ಹಾಗೆ ಹೆಚ್ಚು ಕೂದಲಿರುವ ಜನ ಪರಿಹಾಸ್ಯ ಮಾಡುತ್ತಾರೆ. ಇದರಿಂದ ಅಂತಹ ವ್ಯಕ್ತಿಗಳಿಗೆ ನೋವಾಗಬಹುದು" ಎನ್ನುತ್ತಾರೆ. 
ಇದರ ಸುತ್ತ ಹಾಸ್ಯ ಚರ್ಚೆಯನ್ನು ಮಾಡುವ ಇರಾದೆ ಹೊಂದಿದ್ದರೂ, ಬೋಳು ತಲೆಯ ಯಾವ ವ್ಯಕ್ತಿಯು ಇದಕ್ಕೆ ಮುಂದಾಗದೆ ಇದ್ದಿದ್ದರಿಂದ ಕೈಬಿಟ್ಟೆ ಎನ್ನುತ್ತಾರೆ. 
"ಆದುದರಿಂದ ತಲೆಯಲ್ಲಿ ಹೆಚ್ಚು ಕೂದಲಿರುವ ಜನ, ಮೊಟ್ಟೆ ತಲೆ ಜೊತೆಗೊಂದು ಸೆಲ್ಫಿಯಲ್ಲಿ ಭಾಗಿಯಾಗಿ, ಬೋಳು ತಲೆಯವರ ಅನುಭವ ಪಡೆಯಬೇಕು.  ನಂತರ ಬೋಳು ತಲೆ ಹೊಂದಿರುವುದು ಹೊಸ ಶೈಲಿಯಾಗುತ್ತದೆ ಎಂದು ನಂಬಿದ್ದೇನೆ" ಎನ್ನುತ್ತಾರೆ ಪವನ್. 
ಚೊಚ್ಚಲ ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ಅವರೇ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಒಂದು ಮೊಟ್ಟೆಯ ಕಥೆ' ಜುಲೈ ೭ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾಗೆ ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com