ಇದು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ೧೯೯೦ರ ಪ್ರಖ್ಯಾತ ಸಿನೆಮಾ ಮುತ್ತಿನ ಹಾರ ಶೀರ್ಷಿಕೆಯನ್ನೇ ಹೊತ್ತಿರುವುದು ವಿಶೇಷ. ಆ ಸಿನೆಮಾದಲ್ಲಿ ವಿಷ್ಣುವರ್ಧನ್ ಮತ್ತು ಸುಹಾಸಿನಿ ನಟಿಸಿದ್ದರು. ಈ ಸಿನೆಮಾದಲ್ಲಿ ವಿಷ್ಣು, ಪೃಥ್ವಿ ಪಾತ್ರದ ತಂದೆಯಾಗಿ ಮೂಡಲಿದ್ದಾರಂತೆ ಮತ್ತು ಪೃಥ್ವಿ ಅವರ ಪಾತ್ರದ ಹೆಸರು ವಿರಾಜ್ ಎಂತಿದ್ದು, ಹಳೆಯ ಮುತ್ತಿನ ಹಾರ ಸಿನೆಮಾದಲ್ಲಿ ವಿಷ್ಣು-ಸುಹಾಸಿನಿ ಜೋಡಿಯ ಪುತ್ರನ ಹೆಸರೂ ಕೂಡ ವಿರಾಜ್ ಆಗಿತ್ತು. ಇಲ್ಲಿಯೂ ಪೃಥ್ವಿ ತಾಯಿಯ ಪಾತ್ರಕ್ಕೆ ಸುಹಾಸಿನಿ ಅವರನ್ನು ಕೇಳಿಕೊಳ್ಳಲಾಗಿತ್ತಾದರೂ, ದಿನಾಂಕಗಳ ಹೊಂದಾಣಿಕೆಯಾಗಲಿಲ್ಲ ಎನ್ನುತ್ತಾರೆ ನಿರ್ದೇಶಕ. ಹಳೆಯ ಮುತ್ತಿನ ಹಾರ ಕಥೆಗೂ ನಮ್ಮ ಸಿನೆಮಾಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ರಿಷಿ "ಇದು ಥ್ರಿಲ್ಲರ್ ಸಿನೆಮಾ" ಎನ್ನುತ್ತಾರೆ.