ಡಿಮಾನೆಟೈಸೇಶನ್ ಬವಣೆಗಳ ಬಗ್ಗೆ ಭಾರತಿರಾಜ್ ಸಿನೆಮಾ ಚಿತ್ರೀಕರಣ ಪ್ರಾರಂಭ

ಖ್ಯಾತ ತಮಿಳು ಚಿತ್ರನಿರ್ದೇಶಕ ಭಾರತಿರಾಜ್ ಅವರ ಮುಂದಿನ ತಮಿಳು ಸಿನೆಮಾ 'ನವೆಂಬರ್ ೮ ಇರವು ಎತ್ತು ಮಣಿ' (ನವೆಂಬರ್ ೮ ರಾತ್ರಿ ಎಂಟು ಘಂಟೆ) ಮಂಗಳವಾರದಿಂದ ಚಿತ್ರೀಕರಣ ಪ್ರಾರಂಭಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ಖ್ಯಾತ ತಮಿಳು ಚಿತ್ರನಿರ್ದೇಶಕ ಭಾರತಿರಾಜ್ ಅವರ ಮುಂದಿನ ತಮಿಳು ಸಿನೆಮಾ 'ನವೆಂಬರ್ ೮ ಇರವು ಎತ್ತು ಮಣಿ' (ನವೆಂಬರ್ ೮ ರಾತ್ರಿ ಎಂಟು ಘಂಟೆ)  ಮಂಗಳವಾರದಿಂದ ಚಿತ್ರೀಕರಣ ಪ್ರಾರಂಭಿಸಿದೆ. ಇದು ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರದಿಂದ ಉಂಟಾದ ಬವಣೆಗಳ ಬಗೆಗಿನ ಚಿತ್ರ. 
ಮುಖ್ಯ ಭೂಮಿಕೆಯಲ್ಲಿ ವಿದಾರ್ಥ್ ನಟಿಸಲಿದ್ದು, ಪ್ರಮುಖವಾಗಿ ಚೆನ್ನೈ ಮತ್ತು ಪುದುಚೆರಿಯಲ್ಲಿ ಚಿತ್ರೀಕರಣಗೊಳ್ಳಲಿದೆ. 
"ನೋಟು ಹಿಂಪಡೆತ ನಿರ್ಧಾರದ ನಂತರ ನಡೆದ ಘಟನೆಗಳು ಕಥೆಯಲ್ಲಿ ಕಾಣಿಸಿಕೊಳ್ಳಲಿವೆ. ಇದು ವಿಡಂಬನಾ ಚಿತ್ರ. ಹಿರಿಯ ವ್ಯಕ್ತಿಯ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ. ಯಾರು ಸಿಗದಿದ್ದರೆ ಭಾರತಿರಾಜ ಅವರೇ ಅದನ್ನು ಮಾಡುವ ಸಾಧ್ಯತೆ ಇದೆ" ಎಂದು ಸಿನೆಮಾ ತಂಡದ ಮೂಲಗಳು ತಿಳಿಸಿವೆ. 
ಎರಡು ತಿಂಗಳಲ್ಲಿ ಸಿನೆಮಾದ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ರತ್ನಕುಮಾರ್ ಕಥೆ ಬರೆದಿದ್ದು, ಸಾಲೈ ಸಹದೇವಂ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 
"ಇಳಯರಾಜ ಅವರ ಜೊತೆಗೆ ಮಾತುಕತೆ ಜಾರಿಯಲ್ಲಿದ್ದು ಅವರು ಸಂಗೀತ ನೀಡುವ ಸಾಧ್ಯತೆಯಿದೆ" ಎನ್ನುತ್ತವೆ ಮೂಲಗಳು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com