ಸತೀಶ್ ನೀನಾಸಂ-ಭಾವನಾ
ಸಿನಿಮಾ ಸುದ್ದಿ
ಟಪಾಂಗುಚ್ಚಿ ನೃತ್ಯ ಮಾಡಿದ ಸತೀಶ್-ಭಾವನಾ ಜೋಡಿ
ಸತೀಶ್ ನೀನಾಸಂ ಅವರ ಮೊದಲ ಮಾಸ್ ಕಮರ್ಷಿಯಲ್ ಸಿನೆಮಾ ಆಗಲಿದೆ ಎಂದು ಬಣ್ಣಿಸಲಾಗಿರುವ ಸಿನೆಮಾ 'ಟೈಗರ್ ಗಲ್ಲಿ'ಯಲ್ಲಿ, ಐದು ಫೈಟ್ ಗಳಲ್ಲಿ ಭಾಗಿಯಾಗಿರುವುದಲ್ಲದೆ ಟಪಾಂಗುಚ್ಚಿ ಶೈಲಿಯ
ಬೆಂಗಳೂರು: ಸತೀಶ್ ನೀನಾಸಂ ಅವರ ಮೊದಲ ಮಾಸ್ ಕಮರ್ಷಿಯಲ್ ಸಿನೆಮಾ ಆಗಲಿದೆ ಎಂದು ಬಣ್ಣಿಸಲಾಗಿರುವ ಸಿನೆಮಾ 'ಟೈಗರ್ ಗಲ್ಲಿ'ಯಲ್ಲಿ, ಐದು ಫೈಟ್ ಗಳಲ್ಲಿ ಭಾಗಿಯಾಗಿರುವುದಲ್ಲದೆ ಟಪಾಂಗುಚ್ಚಿ ಶೈಲಿಯ ಕುಣಿತದಲ್ಲಿಯೂ ಸತೀಶ್ ಹೆಜ್ಜೆ ಹಾಕಿದ್ದಾರೆ.
ಈ ನೃತ್ಯ ದೃಶ್ಯದ ಫೋಟೋ ಈಗ ಲಭ್ಯವಾಗಿದ್ದು ಸತೀಶ್ ಮತ್ತು ಭಾವನಾ ಲುಂಗಿ ತೊಟ್ಟು ಹೆಜ್ಜೆ ಹಾಕುತ್ತಿರುವುದು ಗೋಚರವಾಗಿದೆ. ಇದು 'ಚೆನ್ನೈ ಎಕ್ಸ್ಪ್ರೆಸ್' ಸಿನೆಮಾದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಮಾಡಿದ ಲುಂಗಿ ಡ್ಯಾನ್ಸ್ ಮಾದರಿಯದ್ದೇ ಎಂಬ ಸಂದೇಹ ಕೂಡ ಮೂಡುತ್ತದೆ.
ಈ ಹಾಡು ಮೆಲೋಡ್ರಾಮಾಟಿಕ್ ಎನ್ನುವ ಸತೀಶ್ ಸಿನೆಮಾದಲ್ಲಿ ವಿಶಿಷ್ಟವಾಗಿ ನಿಲ್ಲುತ್ತದೆ ಎಂದಿದ್ದಾರೆ. "ಉತ್ತರ ಕನ್ನಡ ಮತ್ತು ಮಂಡ್ಯ ಆಡು ಭಾಷೆಯಲ್ಲಿ ಕೆ ವಿ ರಾಜು ಗೀತರಚನೆ ಮಾಡಿದ್ದಾರೆ" ಎಂದು ತಿಳಿಸುತ್ತಾರೆ ನಟ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ