ಅಮಿತಾಬ್ ಬಚ್ಚನ್
ಸಿನಿಮಾ ಸುದ್ದಿ
ಆರ್ ಜಿ ವಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಬಿಗ್ ಬಿ
ಮುಂಬೈನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ರಮೇಶ್ ಸಿಪ್ಪಿ ಅವರೊಂದಿಗೆ ಅಮಿತಾಬ್ ಬಚ್ಚನ್ ಭಾಗವಹಿಸಿದ್ದರು. ಸಾಮಾನ್ಯವಾಗಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಮೆಗಾ ಸ್ಟಾರ್,
ಮುಂಬೈ: ಮುಂಬೈನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ರಮೇಶ್ ಸಿಪ್ಪಿ ಅವರೊಂದಿಗೆ ಅಮಿತಾಬ್ ಬಚ್ಚನ್ ಭಾಗವಹಿಸಿದ್ದರು. ಸಾಮಾನ್ಯವಾಗಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಮೆಗಾ ಸ್ಟಾರ್, ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿದ್ದ ವಿವಾದಾತ್ಮಕ ಟ್ವೀಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವುದರಿಂದ ಹಿಂದೆ ಸರಿದಿದ್ದಾರೆ.
ಮಾರ್ಚ್ ೮, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಟ್ವೀಟ್ ಮಾಡಿದ್ದ ಆರ್ ಜಿ ವಿ "ವಿಶ್ವದ ಎಲ್ಲ ಮಹಿಳೆಯರು ಪುರುಷರಿಗೆ ಸನ್ನಿ ಲಿಯೋನ್ ರೀತಿ ಸಂತಸ ನೀಡಬೇಕೆಂಬುದು ನನ್ನ ಆಸೆ" ಎಂದು ಬರೆದಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿಸಿ ಆನಂತರ ಅವರು ಕ್ಷಮೆ ಕೂಡ ಕೇಳಿದ್ದರು.
ಆರ್ ಜಿ ವಿ ಮತ್ತು ಅಮಿತಾಬ್ ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಆದುದರಿಂದ ನೆರೆದಿದ್ದ ಮಾಧ್ಯಮಗಳು ಈ ವಿವಾದಾತ್ಮಕ ಟ್ವೀಟ್ ಬಗ್ಗೆ ಅಮಿತಾಬ್ ಅವರನ್ನು ಪ್ರಶ್ನಿಸಿದಾಗ, ಉತ್ತರಿಸಲು ನಿರಾಕರಿಸಿಸಿ ಮುಂದಿನ ಪ್ರಶ್ನೆ ಕೇಳುವಂತೆ ಸೂಚಿಸಿದ್ದಾರೆ.
ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ನಲ್ಲಿ ವಾದ ಸೃಷ್ಟಿಸುತ್ತಿರುವುದು ಇದೆ ಮೊದಲೇನಲ್ಲ. ಈ ಹಿಂದೆ ಅಮಿತಾಬ್ ಬಚ್ಚನ್ ಅವರ ಬಗ್ಗೆಯೂ ಅನುಚಿತವಾಗಿ ಬರೆದಿದ್ದ ಆರ್ ಜಿ ವಿ, ಬಿಗ್ ಬಿ ಅಭಿಮಾನಿಗಳು ಕೆರಳಿದ್ದರಿಂದ ನಂತರ ಸ್ಪಷ್ಟಿಕರಣ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ