
ಬೆಂಗಳೂರು: ಸ್ಯಾಂಡಲ್ ವುಡ್ ಇನ್ನೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತಿದೆ. ಈ ವಾರ ಎರಡು ಮಹಿಳಾ ಪ್ರಧಾನ ಕತೆಯುಳ್ಳ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಊರ್ವಿ ಮತ್ತು ಶುದ್ದಿ ಸಿನಿಮಾಗಳು ಈ ವಾರ ತೆರೆಗೆ ಬರಲಿವೆ. ವರ್ಣ ಚಿತ್ರಕಾರ ಪ್ರದೀಪ್ ವರ್ಮಾ ನಿರ್ದೇಶನದ ಈ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದೆ.
ಶೃತಿ ಹರಿರಹರನ್, ಶ್ರದ್ಧಾ ಶ್ರೀನಾಥ್ ಮತ್ತು ಶ್ವೇತಾ ಪಂಡಿತ್ ನಾಯಕಿಯರಾಗಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಊರ್ವಿ ಚಿತ್ರದಲ್ಲಿ ತಮ್ಮ ಪಾತ್ರಗಳ ಬಗ್ಗೆ ವಿವರಿಸಿರುವ ನಾಯಕಿಯರು ಸಿನಿಮಾ ಕಥೆಯನ್ನು ತ್ರಿಶೂಲಕ್ಕೆ ಹೋಲಿಸಿದ್ದಾರೆ. ಭಕ್ತಿ, ಶಕ್ತಿ ಮತ್ತು ಯುಕ್ತಿ ಊರ್ವಿ ಸಿನಿಮಾದ ಕಥಾ ವಸ್ತುವಾಗಿದೆ.
ಪ್ರದೀಪ್ ವರ್ಮಾ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ನನ್ನ ಬಹುತೇಕ ಸಿನಿಮಾಗಳು ಮಹಿಳಾ ಕೇಂದ್ರಿಕೃತ ಕಥೆಯನ್ನು ಹೊಂದಿವೆ. ಈ ಸಿನಿಮಾ ಕೂಡ ಮಹಿಳಾ ಪ್ರಧಾನ ಸಿನಿಮಾವಾಗಿದೆ ಎಂದು ಹೇಳಿದ್ದಾರೆ. ಊರ್ವಿ ಸಿನಿಮಾ ಸಮಾಜದಲ್ಲಿ ಕತ್ತಲೆಯಲ್ಲಿ ಮುಳುಗಿರುವವರನ್ನು ಬೆಳಕಿನೆಡೆಗೆ ತರುವ ಪ್ರಯತ್ನದ ಸಿನಿಮಾವಾಗಿದೆ ಎಂದು ನಟಿ ಶ್ವೇತಾ ಪಂಡಿತ್ ಅಭಿಪ್ರಾಯ ಪಟ್ಟಿದ್ದಾರೆ.
Advertisement