ಬೆಂಗಳೂರು: ಮುಗುಳು ನಗೆ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಕೊನೆ ಕ್ಷಣದಲ್ಲಿ ನಾಯಕಿ ನಟಿಯ ಬದಲಾವಣೆ ಮಾಡಿದ್ದಾರೆ.
ಈ ಹಿಂದೆ ಅಮೂಲ್ಯ ಗಣೇಶ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದರು, ಸದ್ಯ ಅಮೂಲ್ಯ ಮುಗುಳುನಗೆಯಿಂದ ಔಟ್ ಆಗಿದ್ದು , ಅಪೂರ್ವ ಅರೋರಾ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.
ನಟಿ ಅಮೂಲ್ಯ ಇತ್ತೀಚೆಗೆ ಜಗದೀಶ್ ಆರ್. ಚಂದ್ರ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮೇ ತಿಂಗಳಲ್ಲಿ ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ, ಹೀಗಾಗಿ ಮುಂದಿನ 25 ದಿನಗಳ ಕಾಲ ಅಮೂಲ್ಯ ಶೂಟಿಂಗ್ ಡೇಟ್ ಗೆ ಸಿಗದ ಕಾರಣ ನಿರ್ದೇಶಕ ಯೋಗರಾಜ್ ಭಟ್ ಈ ನಿರ್ಧಾರ ಕೈಗೊಂಡಿದ್ದಾರೆ.
ಮುಗುಳು ನಗೆ ಸಿನಿಮಾಗಾಗಿ ಗಣೇಶ್ ಮತ್ತು ಅಮೂಲ್ಯರ ಫೋಟೋಶೂಟ್ ಕೂಡ ನಡೆದಿತ್ತು.
ಸಿದ್ದಾರ್ಥ ಸಿನಿಮಾದಲ್ಲಿ ನಟಿಸಿದ್ದ ಅಪೂರ್ವ ಅರೋರಾ ಹಿಂದಿ ಮತ್ತು ಪಂಜಾಬ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಜೊತೆ ಸಿದ್ದಾರ್ಥ ಸಿನಿಮಾದಲ್ಲಿ ಅಭಿನಯಸಿದ್ದರು.
ಮುಗುಳುನಗೆ ಸಿನಿಮಾದಲ್ಲಿ ಗಣೇಶ್ ಜೊತೆ ಆಶಿಕಾ ರಂಗನಾಥ್, ನಿಖಿತಾ ನಾರಾಯಣ್ ಕೂಡ ಅಭಿನಯಿಸಿದ್ದಾರೆ. ಗೋಲ್ಡನ್ ಮೂವೀಸ್ ನಿರ್ಮಾಣದ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ.